ಜನವರಿಯಲ್ಲಿ ಒಟ್ಟು 5 ದಿನಗಳ ಮುಷ್ಕರ: ಬ್ಯಾಂಕಿಂಗ್ ಸಂಘಟನೆಗಳ ನಿರ್ಧಾರ

ಶನಿವಾರ, 20 ಡಿಸೆಂಬರ್ 2014 (17:59 IST)
ಬ್ಯಾಂಕಿಂಗ್ ಕ್ಷೇತ್ರದ ಸಂಘಟನೆಗಳು ತಮ್ಮ ವೇತನದ ಏರಿಕೆ ಮಾತುಕತೆಯ ಶೀಘ್ರ ಆರಂಭಕ್ಕೆ ಒತ್ತಾಯಿಸಲು ಐದು ದಿನಗಳ ಮುಷ್ಕರವನ್ನು ಪ್ರಕಟಿಸಿದ್ದಾರೆ.  ಎಐಬಿಇಎ ಚೆನ್ನೈನಲ್ಲಿ ನೀಡಿದ ಹೇಳಿಕೆಯಲ್ಲಿ ಬ್ಯಾಂಕ್‌ಗಳ ಒಕ್ಕೂಟವು ಮುಂಬೈನಲ್ಲಿ ಡಿ. 17ರಂದು ನಡೆದ ಸಭೆಯಲ್ಲಿ ಜನವರಿ 7ರಂದು ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

 ಅದರ ಹಿಂದೆಯೇ ಜನವರಿ 21ರಿಂದ 24ರವರೆಗೆ ಸತತ ಮುಷ್ಕರ ಮತ್ತು ಮಾರ್ಚ್ 16ರ ನಂತರ ಅನಿರ್ದಿಷ್ಟಾವಎಧಿ ಮುಷ್ಕರವನ್ನು ಆರಂಭಿಸಲಾಗುತ್ತದೆ.

ಬ್ಯಾಂಕ್ ಸಂಘಟನೆಗಳ ಒಕ್ಕೂಟವು ತನ್ನ ಸಭೆಯಲ್ಲಿ ವೇತನ ಮಾತುಕತೆಗೆ ಸಂಬಂಧಿಸಿ ಐಬಿಎ ಉದಾಸೀನ ಧೋರಣೆಗೆ ಅತೃಪ್ತಿ ವ್ಯಕ್ತಪಡಿಸಿದೆ.
 

ವೆಬ್ದುನಿಯಾವನ್ನು ಓದಿ