ಬಿಎಸ್‌ಎನ್‌ಎಲ್‌ ನಷ್ಟಕ್ಕೆ ಕಾಂಗ್ರೆಸ್ ನೇತೃತ್ವದ ಯುಪಿಎ ನೇರ ಹೊಣೆ: ಕೇಂದ್ರ ಸರ್ಕಾರ

ಗುರುವಾರ, 12 ಮೇ 2016 (12:49 IST)
ಸರಕಾರಿ ಒಡೆತನದ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳು ನಷ್ಟ ಅನುಭವಿಸಲು ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವೇ ನೇರ ಹೊಣೆ ಎಂದು ಕೇಂದ್ರ ಸರ್ಕಾರ ಆರೋಪ ಮಾಡಿದೆ.
ಬಿಎಸ್‌ಎನ್‌ಎಲ್‌ ಟೆಲಿಕಾಂ ಸಂಸ್ಥೆ, 2004 ರ ಸಾಲಿನಲ್ಲಿ 10,000 ಕೋಟಿ ಲಾಭದಲ್ಲಿದ್ದು, ಎಂಟಿಎನ್‌ಎಲ್‌ 900 ಕೋಟಿ ಲಾಭದಲ್ಲಿತ್ತು ಎಂದು ಟೆಲಿಕಾಂ ಸಚಿವ ರವಿಶಂಕರ್‌ ಪ್ರಸಾದ್‌ ಲೋಕಸಭೆಗೆ ತಿಳಿಸಿದ್ದಾರೆ.
 
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್‌ 8000 ಕೋಟಿ ಮತ್ತು ಎಂಟಿಎನ್‌ಎಲ್‌ 2000 ಕೋಟಿ ನಷ್ಟದಲ್ಲಿದ್ದು, ಈ ಕುರಿತು ಸಂಸತ್‌ನಲ್ಲಿ ಚರ್ಚೆಗೆ ಸಿದ್ಧ ಎಂದು ಕೇಂದ್ರ ಸಚಿವರು ಪ್ರತಿಪಕ್ಷಗಳಿಗೆ ಸವಾಲ್ ಎಸದಿದ್ದಾರೆ.
 
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಸತತ ಪ್ರಯತ್ನದ ಫಲವಾಗಿ ಬಿಎಸ್‌ಎನ್‌ಎಲ್‌ ಮತ್ತು ಎಂಟಿಎನ್‌ಎಲ್‌ ಸಂಸ್ಥೆಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿವೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ