ಆರ್‌ಬಿಐ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕ

ಭಾನುವಾರ, 21 ಆಗಸ್ಟ್ 2016 (11:29 IST)
ಭಾರತೀಯ ರಿಸರ್ವ್ ಬ್ಯಾಂಕ್‌ನ ಗವರ್ನರ್ ರಘುರಾಮ್ ರಾಜನ್ ಸೆಪ್ಟೆಂಬರ್ ಮೊದಲ ವಾರದಲ್ಲಿ ನಿವೃತ್ತರಾಗಲಿರುವುದರಿಂದ ಅವರ ಸ್ಥಾನಕ್ಕೆ 24 ನೇ ಗವರ್ನರ್ ಆಗಿ ಉರ್ಜಿತ್. ಆರ್. ಪಟೇಲ್ ನೇಮಕಗೊಂಡಿದ್ದಾರೆ.
ಉರ್ಜಿತ್ ಪಟೇಲ್, ಪ್ರಸ್ತುತ ಭಾರತೀಯ ರಿಸರ್ವ್ ಬ್ಯಾಂಕ್‌ನ ಉಪ ಗವರ್ನರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಮೂರು ವರ್ಷಗಳ ಅಧಿಕಾರವಧಿಯನ್ನು ನಿರ್ವಹಿಸಲಿದ್ದಾರೆ.  
 
ಕೇಂದ್ರ ಸಚಿವ ಸಂಪುಟದ ನೇಮಕಾತಿ ಸಮಿತಿ ಉರ್ಜಿತ್ ಪಟೇಲ್ ಅವರ ನೇಮಕಾತಿಗೆ ಅನುಮತಿ ನೀಡಿದೆ ಎಂದು ಸರಕರಾದ ಮೂಲಗಳು ತಿಳಿಸಿವೆ.
 
ಆರ್ಥಿಕತೆ ಚೇತರಿಕೆ, ಹಣದುಬ್ಬರ ನಿಯಂತ್ರಣ ಸೇರಿದಂತೆ ರಾಜನ್ ರೂಪಿಸಿದ ಯೋಜನೆಗಳನ್ನು ಜಾರಿಗೆ ತರಲು ಪ್ರಧಾನಿ ಮೋದಿ, ಉರ್ಜಿತ್ ಪಟೇಲ್ ಅವರ ನೇಮಕಕ್ಕೆ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ರಘುರಾಮ್ ರಾಜನ್ ಅವರ ಸಹದ್ಯೋಗಿಯಾಗಿರುವ ಪಟೇಲ್, ಹಣದುಬ್ಬರವನ್ನು ನಿಗದಿತ ಅವಧಿಯೊಳಗೆ ನಿಯಂತ್ರಿಸುವುದು ದೇಶದ ಆರ್ಥಿಕತೆಯನ್ನು ಬಲಾಢ್ಯಗೊಳಿಸುವುದು ಅವರ ಪ್ರಮುಖ ಆದ್ಯತೆಗಳಾಗಿವೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.  
 
ಭಾರತೀಯ ರಿಸರ್ವ್ ಬ್ಯಾಂಕ್ ಹಣದುಬ್ಬರ ದರ ಶೇ.5 ಕ್ಕಿಂತ ಕೆಳಗಿರಬೇಕು ಎನ್ನುವ ಗುರಿ ಹೊಂದಿರುವಾಗಲೇ,ಇದೀಗ ಹಣದುಬ್ಬರ ದರ ಶೇ.6.07 ಕ್ಕೆ ತಲುಪಿರುವ ಸಂದರ್ಭದಲ್ಲಿ ಉರ್ಜಿತ್ ಪಟೇಲ್‌ಗೆ ಹೊಸ ಸವಾಲನ್ನು ಎದುರಿಸಬೇಕಾಗಿ ಬಂದಿದೆ.  
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ