ಅಮೆರಿಕದ ಡಾಲರ್ ನೋಟುಗಳಿಗೆ ಗುಜರಾತಿನ ನಂಟು

ಸೋಮವಾರ, 25 ಮೇ 2015 (18:21 IST)
ಅಮೆರಿಕದ ಡಾಲರ್ ಜಗತ್ತಿನಲ್ಲೇ ಅತ್ಯಂತ ಪ್ರಬಲ ಕರೆನ್ಸಿಯಾಗಿದ್ದು, ಭಾರತದ ಜತೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ.  ಅಮೆರಿಕದ ಡಾಲರ್ ಬಿಲ್ ಅಥವಾ ಕರೆನ್ಸಿ  ಸಾಮಾನ್ಯವಾಗಿ ಹಸಿರು ಬಣ್ಣದಿಂದ ಕೂಡಿರುತ್ತದೆ.
 
ಅಮೆರಿಕದ ಡಾಲರ್ ಬಿಲ್‌ಗಳನ್ನು ತಯಾರಿಸಲು ಬಳಸಲು ಹಸಿರು ಬಣ್ಣದ ವರ್ಣದ್ರವ್ಯವನ್ನು ನಾವು ಪೂರೈಕೆ ಮಾಡುತ್ತಿರುವುದಾಗಿ ಅಹ್ಮದಾಬಾದ್ ಮೂಲದ ಮೇಘಮಾನಿ ಆರ್ಗಾನಿಕ್ಸ್  ತಿಳಿಸಿದೆ.
 
ನಮ್ಮ ಗ್ರಾಹಕರಲ್ಲೊಬ್ಬರು  ಅಮೆರಿಕದ ಗ್ರೀನ್‌ಬ್ಯಾಕ್‌ಗೆ ಹಸಿರನ್ನು ಪೂರೈಕೆ ಮಾಡುತ್ತಿದ್ದು, ನಮ್ಮ ವರ್ಣದ್ರವ್ಯದಿಂದ ಡಾಲರ್ ನೋಟಿಗೆ ಹಸಿರು ಬಣ್ಣ ಬಂದಿದೆ ಎಂದು ಮೇಘಮಣಿ ಆರ್ಗಾನಿಕ್ಸ್ ವ್ಯವಸ್ಥಾಪಕ ನಿರ್ದೇಶಕ ಆಶಿಶ್ ಎನ್. ಸೋಪಾರ್ಕರ್ ತಿಳಿಸಿದ್ದಾರೆ.  ಅಮೆರಿಕದ ಡಾಲರ್ ಹಣವನ್ನು ಸಾಮಾನ್ಯವಾಗಿ ಗ್ರೀನ್ ಬ್ಯಾಕ್ ಎಂದು ಉಲ್ಲೇಖಿಸಲಾಗುತ್ತದೆ. 
 
ಮೇಘಮಣಿ ಆರ್ಗಾನಿಕ್ಸ್ ಆಗ್ರೋಕೆಮಿಕಲ್ಸ್ ಮತ್ತು ವರ್ಣದ್ರವ್ಯಗಳ  ತಯಾರಿಕೆ ಸಂಸ್ಥೆಯಾಗಿದ್ದು, ಎನ್‌ಎಸ್‌ಸಿ ಮತ್ತು ಬಿಎಸ್‌ಸಿ ಪಟ್ಟಿಯಲ್ಲಿದೆ. ವರ್ಣದ್ರವ್ಯಗಳ ತಯಾರಿಕೆಗೆ ಪಾಲುದಾರಿಕೆ ಸಂಸ್ಥೆಯಾಗಿ  ಗುಜರಾತ್ ಕೈಗಾರಿಕೆಗಳನ್ನು 1986ರಲ್ಲಿ ಸ್ಥಾಪಿಸಲಾಯಿತು. ಅಧಿಕ ಉತ್ಪಾದಕರೆ ಮತ್ತು ಲಾಭದಿಂದ ಗುಜರಾತ್ ಇಂಡಸ್ಟ್ರೀಸ್ ಜಂಟಿ ಷೇರು ಕಂಪನಿಯಾಗಿ ಮೇಘಮಣಿ ಆರ್ಗಾನಿಕ್ಸ್ ಎಂಬ ಹೆಸರಿನಲ್ಲಿ ಸ್ಥಾಪನೆಯಾಯಿತು.
 
 

ವೆಬ್ದುನಿಯಾವನ್ನು ಓದಿ