ಹ್ಯಾಕಿಂಗ್‌ಗೆ ಬಲಿಯಾದ ಹಾಟ್‌ಸ್ಟಾರ್ ಟ್ವಿಟ್ಟರ್?

ಶನಿವಾರ, 17 ಡಿಸೆಂಬರ್ 2016 (10:37 IST)
ಪ್ರಸಿದ್ಧ ವಿಡಿಯೋ ಸ್ಟ್ರೀಮಿಂಗ್ ಸೈಟ್ ಹಾಟ್‌ಸ್ಟಾರ್ ಅಧಿಕೃತ ಟ್ವಿಟ್ಟರ್ ಖಾತೆ ಹ್ಯಾಕ್ ಆಗಿದೆ. ಹಾಟ್‌ಸ್ಟಾರ್‌ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅರ್ಥವಿಲ್ಲದ ಟ್ವೀಟ್‌ಗಳು ಕಾಣಿಸಿಕೊಂಡಿವೆ. ಆದರೆ ಈ ಬಗ್ಗೆ ಹಾಟ್‌ಸ್ಟಾರ್ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆ ಹೊರಬಂದಿಲ್ಲ.
 
ಆದರೆ ನೆಟ್ಟಿಗರು ಮಾತ್ರ ಇದು ಲೆಜಿಯಾನ್ ಕೆಲಸವೇ ಆಗಿದೆ ಎಂದು ಅನುಮಾನಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ವಿಜಯ ಮಲ್ಯ ಸೇರಿದಂತೆ ಕೆಲವು ಪ್ರಮುಖರ ಟ್ಟಿಟ್ಟರ್ ಖಾತೆಗಳನ್ನು ಲೆಜಿಯಾನ್ ಸಂಸ್ಥೆ ಹ್ಯಾಕ್ ಮಾಡಿತ್ತು. 
 
ಈಗ ಹಾಟ್‌ಸ್ಟಾರ್ ಅಕೌಂಟ್ ಸಹ ಹ್ಯಾಕ್ ಆಗಿರುವಲ್ಲಿ ಅವರದೇ ಕೈವಾಡ ಎಂದು ಭಾವಿಸಲಾಗಿದೆ. ಆದರೆ ಇದಕ್ಕೆ ಸಂಬಂಧಿಸಿದಂತೆ ಇದುವರೆಗೂ ಹಾಟ್‌ಸ್ಟಾರ್ ಯಾವುದೇ ರೀತಿಯ ವಿವರಗಣೆ ನೀಡಲು ಹೊರಟಿಲ್ಲದಿರುವುದು ಇನ್ನಷ್ಟು ಅನುಮಾನಕ್ಕೆ ಕಾರಣವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ