ವಿಡಿಯೋಕಾನ್‌ದಿಂದ ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಶುಕ್ರವಾರ, 15 ಏಪ್ರಿಲ್ 2016 (12:57 IST)
ಕನ್ಸ್ಯೂಮರ್ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳನ್ನು ತಯಾರಿಸುವ ದೈತ್ಯ ಸಂಸ್ಥೆಯಾಗಿರುವ ವೀಡಿಯೋಕಾನ್, ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಆಂಡ್ರಾಯ್ಡ್ ಅನುಭವವನ್ನು ನೀಡುವ ಉದ್ದೇಶದಿಂದ ಕ್ರಿಪ್ಟಾನ್ ವಿ50ಡಿಎ ಮತ್ತು ಕ್ರಿಪ್ಟಾನ್ ವಿ50ಡಿಸಿ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
ಗ್ರಾಹಕರ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಭಾರತದ ಮಾರುಕಟ್ಟೆಗೆ ಕ್ರಿಪ್ಟಾನ್ ವಿ50ಡಿಎ ಮತ್ತು ಕ್ರಿಪ್ಟಾನ್ ವಿ50ಡಿಸಿ ಆವೃತ್ತಿಯ ಸ್ಮಾರ್ಟ್‌ಪೋನ್‌ ಪರಿಚಯಿಸಲಾಗಿದೆ. ನಿಯಮಿತವಾಗಿ ಹೊಸ ಹೊಸ ಶೈಲಿಯ ಸ್ಮಾರ್ಟ್‌ಫೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಬೇಕು ಎನ್ನುವುದೇ ನಮ್ಮ ಗುರಿಯಾಗಿದೆ ಎಂದು ವಿಡಿಯೋಕಾನ್ ಮೊಬೈಲ್ ಫೋನ್ಸ್ ಮುಖ್ಯಸ್ಥ ಜೆರಾಲ್ಡ್ ಪೆರಿರಾ ಹೇಳಿದ್ದಾರೆ. 
 
ಕ್ರಿಪ್ಟಾನ್ ವಿ50ಡಿಎ ಆವೃತ್ತಿಯ ಸ್ಮಾರ್ಟ್‌ಪೋನ್, 5 ಇಂಚಿನ ಡಬ್ಲೂವಿಜಿಎ ಕೆಪ್ಯಾಸಿಟಿವ್ ಐಪಿಎಸ್ ಸ್ಕ್ರೀನ್, 5 ಮೆಗಾ ಪಿಕ್ಸೆಲ್ ಆಟೋ ಫೊಕಸ್ ರಿಯರ್ ಕ್ಯಾಮೆರಾ ಮತ್ತು 3ಜಿ ನೆಟ್‌ವರ್ಕ್‌ ಒಳಗೊಂಡ ವಿಡಿಯೋ ಕಾಲಿಂಗ್ ಸೌಲಭ್ಯಕ್ಕಾಗಿ 2 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. 
 
ಈ ಆವೃತ್ತಿ ಪೋನ್‌ಗಳು ರೋಮಾಂಚಕವಾಗಿರುವ ಬಣ್ಣದ ಪ್ಯಾನಲ್ ಜೊತೆಗೆ ಅದ್ಭುತ ವಿನ್ಯಾಸ ಮತ್ತು ವೈಶಿಷ್ಟ್ಯಗಳನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ 5,999 ರೂಪಾಯಿಗಳಿಗೆ ಲಭ್ಯವಿದೆ ಎಂದು ಮೂಲಗಳು ತಿಳಿಸಿವೆ.
 
ಈ ಪೋನ್‌ಗಳು ಇತ್ತೀಚಿನ ಆಂಡ್ರಾಯ್ಡ್ 5.0 ಲಾಲಿಪಾಪ್ ಆಪರೇಟಿಂಗ್ ಸಿಸ್ಟಮ್, 1 ಜಿಬಿ ರ್ಯಾಮ್ ಜೊತೆಗೆ 1.3ಜಿಎಚ್‌ಝಡ್ ಕ್ವಾಡ್-ಕೋರ್ ಪ್ರೊಸೆಸರ್, 8ಜಿಬಿ ರಾಮ್ ಹೊಂದಿದ್ದು, 3000 ಎಮ್‌ಎಎಚ್ ಬ್ಯಾಟರಿ ಹೊಂದಿದೆ. 
 
ಕ್ರಿಪ್ಟಾನ್ ವಿ50ಡಿಸಿ ಆವೃತ್ತಿಯ ಪೋನ್‌ಗಳು ಉತ್ತಮ ಗುಣಮಟ್ಟದ 8 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಜೊತೆಗೆ ಶಾರ್ಫ್ ಸೆಲ್ಫಿ ಚಿತ್ರ ಸೆರೆಹಿಡಿಯಲು ಮತ್ತು ವಿಡಿಯೋ ಕಾಲಿಂಗ್ ಸೌಲಭ್ಯಕ್ಕಾಗಿ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಒಳಗೊಂಡಿದೆ.

ವೆಬ್ದುನಿಯಾವನ್ನು ಓದಿ