ಫೇಸ್‌ಬುಕ್‌ನಲ್ಲಿ ಪೋರ್ನ್ ಲಿಂಕ್ ಕ್ಲಿಕ್ ಮಾಡಿದರೆ ವೈರಸ್ ದಾಳಿ

ಶನಿವಾರ, 31 ಜನವರಿ 2015 (18:17 IST)
ಅತೀ ದೊಡ್ಡ ಸಾಮಾಜಿಕ ಜಾಲ ತಾಣ ಫೇಸ್‌ಬುಕ್‌ಗೆ ಕೂಡ ಈಗ ವೈರಸ್ ಕಾಟ ಷುರುವಾಗಿದೆ. ಫೇಸ್‌ಬುಕ್‌ನಲ್ಲಿ  ನೀವು ಅಶ್ಲೀಲ ಚಿತ್ರದ ಲಿಂಕ್ ಕ್ಲಿಕ್ ಮಾಡಿದರೆ ಜೋಕೆ, ಪೋರ್ನ್ ಮೂಲದ ಮಾಲ್ವೇರ್ ಅಥವಾ ಕಂಪ್ಯೂಟರ್ ವೈರಸ್ ನಿಮ್ಮ  ಕಂಪ್ಯೂಟರ್‌ಗೆ ಸಂಚಕಾರ ತರಬಹುದು.

ಪೋರ್ನ್ ಮೂಲದ ಮಾಲ್ವೇರ್ ಕೇವಲ 2 ದಿನಗಳಲ್ಲಿ 110,000 ಫೇಸ್‌ಬುಕ್ ಬಳಕೆದಾರರ ಕಂಪ್ಯೂಟರ್‌ಗಳಲ್ಲಿ ಸೋಂಕು ತಗುಲಿಸಿದೆ. ನಿಮ್ಮ ಕಂಪ್ಯೂಟರ್ ಕೂಡ ಅದೇ ರೀತಿಯ ಕ್ಲಿಕ್‌ನಿಂದ ಉಂಟಾಗುವ ಕಾಯಿಲೆಗೆ ಗುರಿಯಾಗಬಹುದು. ಫೇಸ್‌ಬುಕ್ ಮಾಲ್‌ವೇರ್ ಫ್ಲಾಷ್ ಅಪ್‌ಡೇಟ್ ವೇಷದಲ್ಲಿರುತ್ತದೆ. ಮೂಲತಃ ಪೋರ್ನ್ ವಿಡಿಯೋಗೆ ಲಿಂಕ್ ಒಂದನ್ನು ಸ್ನೇಹಿತನ ಪೋಸ್ಟ್‌ನಲ್ಲಿ ನೋಡುತ್ತೀರಿ.

ಅದನ್ನು ಕ್ಲಿಕ್ ಮಾಡಿದರೆ ನಿಮ್ಮನ್ನು ವೆಬ್‌ಸೈಟ್ ಒಂದಕ್ಕೆ ತೆಗೆದುಕೊಂಡು ಹೋಗುತ್ತದೆ ಮತ್ತು ವೀಡಿಯೋ ಕೆಲವು ಸೆಕೆಂಡುಗಳ ಕಾಲ ಇರುತ್ತದೆ. ನಂತರ ವೀಡಿಯೋ ಫ್ಲ್ಯಾಷ್ ಅಪ್‌ಡೇಟ್ ಡೌನ್ಲೋಡ್ ಮಾಡಲು ಪ್ರಚೋದಿಸುತ್ತದೆ.

ಹಾಗೆ ಮಾಡಿದರೆ ಟ್ರೋಜಾನ್‌ ನಿಮ್ಮ ಕಂಪ್ಯೂಟರ್‌ಗೆ ಸೋಂಕು ತಗಲಿಸುತ್ತದೆ ಮತ್ತು ನಿಮ್ಮ ಕೀಬೋರ್ಡ್ ಮತ್ತು ಮೌಸ್ ಹೈಜಾಕ್ ಮಾಡುತ್ತದೆ.  ಒಂದೊಮ್ಮೆ  ಸೋಂಕಿಗೆ ಗುರಿಯಾದರೆ, ಮಾಲ್‌ವೇರ್ ಫೇಸ್‌ಬುಕ್‌‌ಗೆ ಪೋರ್ನ್ ಲಿಂಕ್‌ಗಳನ್ನು ಪೋಸ್ಟ್ ಮಾಡಲಾರಂಭಿಸುತ್ತದೆ ಮತ್ತು ಪ್ರತೀ ಬಾರಿ 20 ಸ್ನೇಹಿತರಿಗೆ ಟ್ಯಾಗ್ ಅಪ್ ಮಾಡುತ್ತದೆ.ಹೀಗೆ ವೈರಸ್ ಅನೇಕ ಮಂದಿ ಫೇಸ್‌ಬುಕ್ ಬಳಕೆದಾರರಿಗೆ ಅತೀ ವೇಗದಲ್ಲಿ ಸೋಂಕುಂಟುಮಾಡುತ್ತದೆ.

ವೆಬ್ದುನಿಯಾವನ್ನು ಓದಿ