ವೊಡಾಫೋನ್‌ನಿಂದ ನಾಲ್ಕು ಪ್ರದೇಶಗಳಿಗೆ 4ಜಿ ಸೇವೆ

ಬುಧವಾರ, 11 ಮೇ 2016 (18:16 IST)
ಟೆಲಿಕಾಂ ಸಂಸ್ಥೆ ವೊಡಾಫೋನ್ ಇಂಡಿಯಾ, ಗುಜರಾತ್, ಹರಿಯಾಣ, ಪೂರ್ವ-ಯುಪಿ ಮತ್ತು ಪಶ್ಚಿಮ ಬಂಗಾಳದಲ್ಲಿ ಶೀಘ್ರದಲ್ಲಿ 4ಜಿ ಸೇವೆಯನ್ನು ನೀಡುವುದಾಗಿ ಘೋಷಿಸಿದೆ. 
 
ಪ್ರಸಕ್ತ ವರ್ಷದ ಅಂತ್ಯದೊಳಗೆ ವೊಡಾಫೋನ್ ಇಂಡಿಯಾ 1000 ಪಟ್ಟಣಗಳಲ್ಲಿ 4ಜಿ ಸೇವೆಯನ್ನು ನೀಡಲಿದೆ ಎಂದು ಸಂಸ್ಥೆಯ ಡೇಟಾ ರೆವೆನ್ಯೂ, ಮುಖ್ಯ ಕಾರ್ಯನಿರ್ವಾಹಕ ಸುನಿಲ್ ಸೂದ್ ಹೇಳಿದ್ದಾರೆ.
 
ದೇಶದ ಎರಡನೆಯ ಅತಿದೊಡ್ಡ ಮೊಬೈಲ್ ಸಂಪರ್ಕ ಸೇವೆಯನ್ನು ನೀಡುತ್ತಿರುವ ವೊಡಾಫೋನ್ ಇಂಡಿಯಾ, ಪ್ರಸ್ತುತ ದೆಹಲಿ, ಕೋಲ್ಕತಾ, ಮುಂಬೈ, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ 1800ಎಮ್‌ಎಚ್‌ಝಡ್ ಬ್ಯಾಂಡ್ 4ಜಿ ಸೇವೆಯನ್ನು ನೀಡುತ್ತಿದೆ
 
ಅಸ್ತಿತ್ವದಲ್ಲಿರುವ ಸ್ಪೆಕ್ಟ್ರಮ್ ಮೂಲಕ ನಾಲ್ಕು ಹೊಸ ವಲಯಗಳಲ್ಲಿ ಉತ್ತಮ ಗುಣಮಟ್ಟದ 4ಜಿ ಕವರೇಜ್ ನೀಡುವುದಾಗಿ ಸುನಿಲ್ ಸೂದ್ ಭರವಸೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ