ವೋಟರ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಇದ್ರೆ ಸಾಕು ಪ್ಯಾನ್ ಕಾರ್ಡ್ ಸಿಗತ್ತೆ

ಮಂಗಳವಾರ, 21 ಏಪ್ರಿಲ್ 2015 (16:33 IST)
ಇನ್ಮುಂದೆ ಪ್ಯಾನ್ ಕಾರ್ಡ್ ಪಡೆಯಲು ಇಪಿಐಸಿ ಅಥವಾ ಆಧಾರ್ ದಾಖಲೆಗಳಿದ್ದರೆ ಸಾಕು. ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಪಡೆಯಲು ಅನೇಕ ದಾಖಲೆಗಳನ್ನು ಒದಗಿಸುವ ಕಠಿಣ ವಿಧಿವಿಧಾನವನ್ನು ಸಡಿಲಗೊಳಿಸಿದೆ.

ವಿಶಿಷ್ಠ ಗುರುತಿನ ಪ್ರಾಧಿಕಾರ ನೀಡುವ  ಆಧಾರ್ ದಾಖಲೆ ಅಥವಾ ಮತದಾರರ ಗುರುತಿನ ಚೀಟಿ ಎರಡರಲ್ಲಿ ಯಾವುದಾದರೂ ಒಂದಿದ್ದರೆ  ಪ್ಯಾನ್ ಕಾರ್ಡ್ ಪಡೆಯಲು ಜನ್ಮದಿನಾಂಕದ ದೃಢ ಸಾಕ್ಷ್ಯ ಒದಗಿಸುತ್ತದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. 
 
ಇಲ್ಲಿವರೆಗೆ ಇವೆರಡೂ ಫೋಟೋ ಗುರುತಿನ ಕಾರ್ಡ್‌ಗಳನ್ನು ಗುರುತು ಮತ್ತು ವಿಳಾಸ ದೃಢೀಕರಣಕ್ಕೆ ಪರಿಗಣಿಸಲಾಗುತ್ತಿದ್ದು, ಜನ್ಮದಿನಾಂಕ ದೃಢೀಕರಣಕ್ಕೆ ಪರಿಗಣಿಸಲಾಗುತ್ತಿರಲಿಲ್ಲ. 

ವೆಬ್ದುನಿಯಾವನ್ನು ಓದಿ