ಜೈಲಿಗೆ ತೆರಳುವ ಮುಂಚೆಯೇ ವಿದೇಶಕ್ಕೆ ಎಸ್ಕೇಪ್ ಆಗಲು ಬಯಸಿದ್ದ ಸುಬ್ರತಾ ರಾಯ್

ಸೋಮವಾರ, 11 ಏಪ್ರಿಲ್ 2016 (19:40 IST)
ಹೈಪ್ರೋಫೈಲ್ ವಂಚನೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜೈಲಿಗೆ ಕಳುಹಿಸುವ ಒಂದು ವಾರದ ಮುಂಚೆ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್ ವಿದೇಶಕ್ಕೆ ತೆರಳಿ ಬಿಲ್ ಕ್ಲಿಂಟನ್ ಮತ್ತು ಟೋನಿ ಬ್ಲೇರ್ ಅವರ ಜೊತೆ ವ್ಯವಹಾರಿಕ ಚರ್ಚೆ ನಡೆಸಲು ಯೋಜನೆ ರೂಪಿಸಿದ್ದರು ಎಂದು ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿ ಪರ ವಕೀಲರಾದ ಅರವಿಂದ್ ದತಾರ್ ತಿಳಿಸಿದ್ದಾರೆ.
ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಹಾರಾ ಮತ್ತು ಸೆಬಿಯ ಮಧ್ಯೆ ನಡೆಯುತ್ತಿರುವ ದೀರ್ಘಕಾಲದ ಕಾನೂನು ಸಮರದ ಕುರಿತಂತೆ ನ್ಯಾಯಾಲಯದ ಮುಂದೆ ವರ್ಣಿಸಿದ ದಾತಾರ್, ಇದೀಗ ಆರಂಭವಾಗಿದೆ. ಅಂತ್ಯ ನಮ್ಮನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆಯೋ ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. 
 
ಸಹರಾ ಸಂಸ್ಥೆ, 3 ಕೋಟಿ ಶೇರುದಾರರಿಗೆ ವಂಚನೆ ಮಾಡಿದ ಆರೋಪದ ಮೇಲೆ ಸುಬ್ರಾತ್ ರಾಯ್ ಅವರನ್ನು ಬಂಧಿಸಿ, 4 ಮಾರ್ಚ್ 2014 ರಂದು, ರಾಷ್ಟ್ರ ರಾಜಧಾನಿಯ ತಿಹಾರ್ ಜೈಲಿಗೆ ಕಳುಹಿಸಲಾಗಿತ್ತು. 
 
ಮುಂಬೈ ಆಸ್ತಿಗೆ ಸಂಬಂಧಿಸಿದ ಪ್ರಕರಣ ಕುರಿತು ನಡೆಯುತ್ತಿದ್ದ ವಿಚಾರಣೆ ಕುರಿತಂತೆ ವಾದ ಮಂಡಿಸಿದ ಅವರು, ಮುಂಬೈ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯ್ ದೇಶ ಬಿಟ್ಟು ತೆರಳದಂತೆ ಆದೇಶಿಸಿದೆ ಎಂದು ತಿಳಿಸಿದ್ದಾರೆ.
 
ಸುಪ್ರೀಂಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ಕೋರುವ ಮುನ್ನವೇ ಸುಬ್ರತಾ ರಾಯ್, ಕೋರ್ಟ್‌ಗೆ ಅರ್ಜಿಯನ್ನು ಸಲ್ಲಿಸಿ, ವಹಿವಾಟಿನ ವಿಷಯ ಕುರಿತು ಬಿಲ್ ಕ್ಲಿಂಟನ್ ಮತ್ತು ಟೋನ್ ಅವರೊಂದಿಗೆ ಚರ್ಚಿಸಲು ವಿದೇಶಕ್ಕೆ ತೆರಳಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ, ಸುಪ್ರೀಂಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು. 

ವೆಬ್ದುನಿಯಾವನ್ನು ಓದಿ