ನಿಮಗೆ ಇಷ್ಟವಾದದ್ದು ಫೇಸ್‌‌ಬುಕ್‌‌ನಲ್ಲಿ ಸೇವ್‌ ಮಾಡಿ

ಬುಧವಾರ, 23 ಜುಲೈ 2014 (18:29 IST)
ಫೇಸ್‌‌ಬುಕ್‌ನಲ್ಲಿ  ನೀವು ಪ್ರತಿ ದಿನ ಸಂದೇಶ , ವಾರ್ತೆಗಳು, ಚಿತ್ರಗಳು , ವಿಡಿಯೋಗಳು ಮತ್ತು ಇತ್ಯಾದಿಗಳು ನೋಡುತ್ತಿರಿ. ಆದರೆ ಕೆಲವು ಸಲ ಇವುಗಳನ್ನು ಓದಲು ಮತ್ತು ನೋಡಲು ಸಮಯ ಸಿಗುವುದಿಲ್ಲ. ಆದರೆ ಸಮಯ ಸಿಕ್ಕಾಗ ಇವುಗಳನ್ನು ನೋಡಬೇಕು ಎಂದು ಎನಿಸುತ್ತದೆ. ಇದಕ್ಕಾಗಿ ಇವುಗಳು ಕೆಲವು ಬಾರಿ ಕಳೆದು ಹೊಗುತ್ತವೆ. ಆದರೆ ಈಗ ಈತರಹ ಕಳೆದು ಹೋಗುವುದಿಲ್ಲ ಮತ್ತು ಇವುಗಳನ್ನು ಸೇವ್‌ ಮಾಡಿ ಇಡಬಹುದಾಗಿದೆ. ಫೇಸ್‌ಬುಕ್‌ ನಿಮಗಾಗಿ ಈ ಸೌಲಭ್ಯ ನೀಡಲಿದೆ ಮತ್ತು ನೀವು ಇವುಗಳನ್ನು ನೋಡಬಹುದು ಮತ್ತು ಗೆಳೆಯರಿಗೆ ಕಳುಹಿಸಬಹುದಾಗಿದೆ. 
 
ಈ ತರಹ ಸೇವ್‌ ಮಾಡಿದ ಐಟಮ್ ನೀವು ಯಾವಾಗ ಬೇಕಾದರು ನೋಡಬಹುದಾಗಿದೆ. ಇದಕ್ಕಾಗಿ ನಿಮ್ಮ ಮೊಬೈಲ್‌ ಫೋನ್‌‌‌ನಲ್ಲಿ ಮೊರ್‌ ಟ್ಯಾಬ್‌‌ನಲ್ಲಿ ನೋಡ ಬಹುದು. ವೆಬ್‌ಮೇಲೆ ನೊಡಲು ನೀವು ಫೇಸ್‌ಬುಕ್‌‌‌‌‌ನ ಎಡಭಾಗದ ಲಿಂಕ್‌ ಕ್ಲಿಕ್‌ ಮಾಡಬೇಕಾಗುತ್ತದೆ. 
 
ನೀವು ಸೇವ್‌ ಮಾಡಿದ ಐಟಮ್‌‌‌ ಕ್ಯಾಟಗರಿಯಿಂದ ಇಡಬಹುದು. ಈ ಐಟಮ್‌‌ ನೀವು ಬಯಸಿದರೆ ನಿಮ್ಮ  ಸ್ನೇಹಿತರಿಗೆ ಕಳುಹಿಸಬಹುದು. ಅಥವಾ ಮತ್ತೊಮ್ಮೆ ಅರ್ಕಾಯಿವ್‌ ಲಿಸ್ಟ್‌‌‌ನಲ್ಲಿ ಹಾಕಬಹುದು. ಇಷ್ಟೆ ಅಲ್ಲ ಫೇಸ್‌‌ಬುಕ್‌‌ ನೀವು ಸೇವ್‌  ಮಾಡಿದ ಐಟಮ್‌‌‌‌ ಬಗ್ಗೆ ರಿಮೈಂಡರ್‌ ನಿಡುತ್ತದೆ. 
 
ಫೇಸ್‌‌ಬುಕ್‌ ಈ ಸೇವ್‌ ಮಾಡಿದ ಆರ್ಟಿಕಲ್‌‌ ಲಿಂಕ್‌ ಕೂಡ ತೋರಿಸುತ್ತಾ ಇರುತ್ತದೆ. ಈ ಸೌಲಭ್ಯ ಎಲ್ಲಾ ತರಹದ ಅಪರೇಟಿಂಗ್‌ ಸಿಸ್ಟಮ್‌ ಆದ ಮಸಲನ್‌‌, ಐಓಎಸ್‌, ಆಂಡ್ರೈಡ್‌‌ ಇತ್ಯಾದಿಗಳಲ್ಲಿ ಮುಂದಿನ ಕೆಲ ದಿನಗಳಲ್ಲಿ ಲಭ್ಯವಿರಲಿದೆ ಎಂದು ಫೇಸ್‌‌ಬುಕ್‌ ಮೂಲಗಳು ತಿಳಿಸಿವೆ. 

ವೆಬ್ದುನಿಯಾವನ್ನು ಓದಿ