ವಾಟ್ಸಪ್‌ನಿಂದ ಡೆಸ್ಕ್‌ಟಾಪ್ ಆಪ್ ಬಿಡುಗಡೆ

ಬುಧವಾರ, 11 ಮೇ 2016 (11:38 IST)
ತ್ವರಿತ ಸಂದೇಶ ಸೇವೆ ನೀಡುತ್ತಿರುವ ವಾಟ್ಸಪ್, ವಿಂಡೋಸ್ ಮತ್ತು ಮ್ಯಾಕ್ ಆಪರೇಟಿಂಗ್ ಸಿಸ್ಟಮ್‌ಗೆ ಡೆಸ್ಕ್‌ಟಾಪ್ ಆಪ್‌ಗಳನ್ನು ಪರಿಚಯಿಸಿದೆ. ಈ ಹೊಸ ವೈಶಿಷ್ಟ್ಯದ ಆಪ್‌ಗಳನ್ನು ವಿಂಡೋಸ್-8 ಮತ್ತು ಮ್ಯಾಕ್ 10.9 ಒಎಸ್‌ ಬಳಕೆದಾರರು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಡೆಸ್ಕ್‌ಟಾಪ್ ಆಪ್‌ಗಳ ಪರಿಚಯದೊಂದಿಗೆ, ಎಲ್ಲಾ ಪ್ರಮುಖ ಪ್ಲಾಟ್‌ಫಾರ್ಮ್‌ನಲ್ಲಿ ವಾಟ್ಸಪ್ ಲಭ್ಯವಾಗಲಿದೆ. ವಾಟ್ಸಪ್ ವೆಬ್ ಬಿಡುಗಡೆಯಾದ ಸುಮಾರು 14 ತಿಂಗಳ ನಂತರ ವಾಟ್ಸಪ್ ಡೆಸ್ಕ್‌ಟಾಪ್ ಆಪ್‌‌ಗಳು ಬಿಡುಗಡೆ ಹೊಂದಿದೆ.
 
ವಿಶೇಷವಾಗಿ, ಈ ಹೊಸ ವೈಶಿಷ್ಟ್ಯದ ವಾಟ್ಸಪ್ ಡೆಸ್ಕ್‌ಟಾಪ್ ಆಪ್‌, ವಾಟ್ಸಪ್ ವೆಬ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಬಳಕೆದಾರರಿಗೆ ಪಾರದರ್ಶಕ ಸಂಭಾಷಣೆ ಸೇವೆಯನ್ನು ನೀಡುತ್ತದೆ.

ವೆಬ್ದುನಿಯಾವನ್ನು ಓದಿ