ಈ ಬಾರಿಯ ಬಜೆಟ್‌ನಲ್ಲಿ ಯಾವುದು ದುಬಾರಿ, ಯಾವುದು ಅಗ್ಗ?

ಶನಿವಾರ, 28 ಫೆಬ್ರವರಿ 2015 (13:15 IST)
ಅರುಣ್ ಜೇಟ್ಲಿ ಮಂಡಿಸಲಿರುವ ಬಜೆಟ್‌ನಲ್ಲಿ ಸೇವಾ ತೆರಿಗೆಯನ್ನು ಹೆಚ್ಚಳಮಾಡಿರುವುದರಿಂದ  ತಂಬಾಕು,ಸಿಗರೇಟು, ಪಾನ್ ಮಸಾಲ, ಹೊಟೆಲ್ ಆಹಾರ, ಬ್ಯೂಟಿ ಪಾರ್ಲರ್ ಶಿಕ್ಷಣ ಶುಲ್ಕ , ಜಿಮ್ ಮತ್ತು ಕ್ಲಬ್ ಮೆಂಬರ್‌ಶಿಪ್, ಕಂಪ್ಯೂಟರ್ ಲ್ಯಾಪ್‌ಟಾಪ್ ಮೊಬೈಲ್ ಫೋನ್, ಸೌಂದರ್ಯ ವರ್ಧಕಗಳು, ಬ್ರಾಂಡೆಡ್ ಚಿನ್ನಾಭರಣ, ಸಿಗರೇಟ್, ಗುಟ್ಕಾ, ಮದ್ಯ, ಆನ್‌ಲೈನ್ ಏರ್ ಟಿಕೆಟ್ ಬುಕಿಂಗ್, ರೆಫ್ರಿಜಿರೇಟರ್, ಬ್ಯಾಂಕಿಂಗ್ ಸೇವೆ, ಹೊಸ ಮನೆ ಖರೀದಿ ಎಲ್ಲವೂ  ದುಬಾರಿಯಾಗಲಿದೆ.

ಚರ್ಮದ ವಸ್ತುಗಳು, 1000 ರೂ. ಮೇಲ್ಪಟ್ಟ ಚರ್ಮದ ಪಾದರಕ್ಷೆಗಳು ಮಾತ್ರ  ಅಗ್ಗವಾಗಲಿದೆ. ತಂಪು ಪಾನೀಯದ ದರ  ಇಳಿಕೆಯಾಗಲಿದೆ. ಈ ಬಾರಿ ಮಂಡಿಸಿದ ಬಜೆಟ್‌ನಲ್ಲಿ ಬೆಲೆ ಏರಿಕೆ ಬಿಸಿಯಿಂದ ಜನಸಾಮಾನ್ಯರನ್ನು ಪಾರು ಮಾಡುವ ಯಾವುದೇ ಕ್ರಮಗಳನ್ನು ಅರುಣ್ ಜೇಟ್ಲಿ ಪ್ರಕಟಿಸಿಲ್ಲ.

ಸೇವಾತೆರಿಗೆ ಹೆಚ್ಚಳದಿಂದ ಬಹುತೇಕ ಪದಾರ್ಥಗಳ ಬೆಲೆ ಏರಿಕೆಯಾಗಲಿದೆ. ಈ ಬಾರಿಯ ಬಜೆಟ್‌ನಲ್ಲಿ ಆದಾಯ ತೆರಿಗೆ ವಿನಾಯಿತಿ ಮಿತಿ ತಗ್ಗಿಸಿ ವೇತನದಾರರ ಜೇಬಿನಲ್ಲಿ ದುಡ್ಡು ಉಳಿಸಬಹುದೆಂದು ನಿರೀಕ್ಷಿಸಲಾಗಿದ್ದು ಅದೂ ಕೂಡ ಹುಸಿಯಾಗಿದೆ. 

ವೆಬ್ದುನಿಯಾವನ್ನು ಓದಿ