ಮಹಿಳೆ ಈಗ ಟಿವಿ ಪ್ರೇಮಿ ಅಲ್ಲ, ಮತ್ತೆ?

ಗುರುವಾರ, 22 ಡಿಸೆಂಬರ್ 2016 (15:57 IST)
ಭಾರತೀಯ ಮಹಿಳೆಯರನ್ನು ಸಾಮಾನ್ಯವಾಗಿ ಟಿವಿ ಪ್ರಿಯರು ಎನ್ನಲಾಗುತ್ತಿದೆ. ಮೆಗಾ ಧಾರಾವಾಹಿಗಳು ಪ್ರಾರಂಭವಾದ ಬಳಿಕವಂತೂ ಈ ವಾದಕ್ಕೆ ಹೆಚ್ಚು ಪುಷ್ಠಿ ದೊರಕಿದೆ. ಮತ್ತೀಗ ಟಿವಿ ಸ್ಥಾನಪಲ್ಲಟವಾಗಿ ಸ್ಮಾರ್ಟ್‌ಫೋನ್ ಮಹಿಳೆಯರ ಆಸಕ್ತಿಯನ್ನು ಗಿಟ್ಟಿಸಿಕೊಂಡಿದೆಯಂತೆ. 
ಹೌದು ಇತ್ತೀಚಿಗೆ ಕೈಗೊಳ್ಳಲಾದ ಸಮೀಕ್ಷೆಯೊಂದರ ಪ್ರಕಾರ ಪುರುಷರಿಗೆ ಹೋಲಿಸಿದರೆ ಅವರಿಗಿಂತ ದುಪ್ಪಟ್ಟು ಸಮಯವನ್ನು ಮಹಿಳೆಯರು ಸ್ಮಾರ್ಟಫೋನ್‌ನಲ್ಲಿ ವ್ಯಯಿಸುತ್ತಾರಂತೆ. 
 
ಮೊಬೈಲ್ ಮಾರ್ಕೆಟಿಂಗ್  ಅಸೋಶಿಯೇಷನ್  (MMA), ಮಾರುಕಟ್ಟೆ ಸಂಶೋಧನಾ ಸಂಸ್ಥೆಯ Kantar IMRB ಜತೆ ನಡೆಸಿದ ಸಮೀಕ್ಷೆಯಲ್ಲಿ ಈ ವರದಿ ಹೊರಬಿದ್ದಿದ್ದು ಸರಾಸರಿ ಒಬ್ಬ ಗ್ರಾಹಕ ದಿನಕ್ಕೆ ಮೂರು ತಾಸು ಸ್ಮಾರ್ಟ್‌ಫೋನ್‌ನಲ್ಲಿ ಕಳೆಯುತ್ತಾನಂತೆ. 2015ಕ್ಕೆ ಹೋಲಿಸಿದರೆ 2016ರಲ್ಲಿ ಇದು 55% ಹೆಚ್ಚಿದೆಯಂತೆ.
 
ಸ್ಮಾರ್ಟ್‌ಫೋನ್‌ ಬಳಸುವುದರಲ್ಲಿ 50% ಸಮಯದಲ್ಲಿ ಅಧಿಪತ್ಯ ಸಾಧಿಸುವುದು ಸಾಮಾಜಿಕ ಮಾಧ್ಯಮಗಳು ಮತ್ತು ಮೆಸೆಜಿಂಗ್ ಆ್ಯಪ್ಸ್ ಎಂದು ತಿಳಿದು ಬಂದಿದೆ.  
 
ಮಹಿಳೆಯರು ಯುಟ್ಯೂಬ್ ಮತ್ತು ಗೇಮ್ಸ್ ಆಡುವುದರಲ್ಲಿ ವ್ಯಸ್ತರಾಗಿರುತ್ತಾರಂತೆ. ಅದರಲ್ಲೂ ಫೇಸ್‌ಬುಕ್‌ನಲ್ಲಿ ಅವರು ಪುರುಷರಿಗಿಂತ 80 ಪ್ರತಿಶತ ಹೆಚ್ಚು ಸಮಯವನ್ನು ಕಳೆಯುತ್ತಾರಂತೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ