ಟಿವಿ ನೋಡುವ ಸಮಯಕ್ಕಿಂತ ವಿಡಿಯೋ ಗೇಮ್ಸ್ ಆಡುವುದು, ಯೂಟ್ಯೂಬ್ ವೀಕ್ಷಿಸುವ ಕೆಲಸಗಳಲ್ಲಿ ಬಿಜಿಯಾಗಿದ್ದಾರಂತೆ ಎಂದು ಸಮೀಕ್ಷೆ ಹೇಳಿದೆ. ಭಾರತದಲ್ಲಿನ ಗ್ರಾಹಕರು ಒಟ್ಟಾರೆ ಮೂರು ಗಂಟೆಗಳ ಕಾಲ ಸ್ಮಾರ್ಟ್‌ಫೋನ್ ಬಳಸುತ್ತಿದ್ದಾರೆ. ಇದು 2015ನೇ ಸಾಲಿಗೆ ಹೋಲಿಸಿದರೆ ಶೇ.55ರಷ್ಟು ಅಧಿಕ. ಇದರಲ್ಲಿ ಸಾಮಾಜಿಕ ಮಾಧ್ಯಮ, ಮೆಸೇಜ್ ಆಪ್‌ಗಳದ್ದೇ ಸಿಂಹಪಾಲು.
ಇನ್ನು ಪುರುಷರಿಗೆ ಹೋಲಿಸಿದರೆ ಮಹಿಳೆಯರು ಸುಮಾರು ಎರಡರಷ್ಟು ಸಮಯವನ್ನು ಗೇಮ್ಸ್, ಯೂಟ್ಯೂಬ್‌ಗೆ ವ್ಯಯಿಸುತ್ತಿದ್ದಾರೆ ಎನ್ನುತ್ತದೆ ಸಮೀಕ್ಷೆ. ಇನ್ನೂ ಶೇ.85ರಷ್ಟು ಮಂದಿಗೆ ಸ್ಮಾರ್ಟ್‌ಫೋನ್‍ಗೆ ಬದಲಾಗಲು ಇಷ್ಟವಿಲ್ಲವಂತೆ. ಫ್ಯೂಚರ್ ಫೋನ್‌ಗಳಲ್ಲಿ ಬ್ಯಾಟರಿ ಬಾಳಿಕೆ, ಕಡಿಮೆ ರಿಪೇರಿ, ರಿಪೇರಿ ಮಾಡಿಕೊಳ್ಳುವ ಅವಕಾಶ ಇರುವ ಕಾರಣ ಅವರು ಸ್ಮಾರ್ಟ್‍ಫೋನ್ ಬಯಸುತ್ತಿಲ್ಲ ಎನ್ನುತ್ತದೆ ಸಮೀಕ್ಷೆ.