ಮೋದಿ ಜನ್‌ಧನ್ ಯೋಜನೆಗೆ ವಿಶ್ವಬ್ಯಾಂಕ್ ಶ್ಲಾಘನೆ

ಭಾನುವಾರ, 19 ಏಪ್ರಿಲ್ 2015 (16:36 IST)
ವಿಶ್ವಬ್ಯಾಂಕ್ ಮುಖ್ಯಸ್ಥ ಜಿಮ್ ಯಾಂಗ್ ಕಿಮ್ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್‌ದನ್ ಯೋಜನೆಯನ್ನು ಶ್ಲಾಘಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಿಂದ ಜನರ ಆರ್ಥಿಕ ಸೇರ್ಪಡೆಯಲ್ಲಿ ಅಸಾಮಾನ್ಯ ಸಾಧನೆ ಆಗಿದೆ ಎಂದು ಹೊಗಳಿದರು.
 
ಪ್ರತಿ ಮನೆಗೆ ಒಂದು ಬ್ಯಾಂಕ್ ಖಾತೆ ಗುರಿಯೊಂದಿಗೆ ಸಮಗ್ರ ಆರ್ಥಿಕ ಒಳಗೊಳ್ಳುವಿಕೆ ಯೋಜನೆ 2014ರ ಆಗಸ್ಟ್‌ನಲ್ಲಿ ಆರಂಭವಾಗಿ 2015 ಜನವರಿಯೊಳಗೆ 125 ದಶಲಕ್ಷ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ವಿಶ್ವಬ್ಯಾಂಕ್ ಈ ವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ. 
 
 ಇದಕ್ಕೆ ಹೋಲಿಸಿದಾಗ 2013ರ ಸಮೀಕ್ಷೆಯಲ್ಲಿ 400 ದಶಲಕ್ಷಕ್ಕಿಂತ ಕಡಿಮೆ ಜನರು ಖಾತೆ ಹೊಂದಿದ್ದರು ಎಂದು ವರದಿ ತಿಳಿಸಿದೆ. 

ವೆಬ್ದುನಿಯಾವನ್ನು ಓದಿ