ಸೋಲಾರ್ ಎನರ್ಜಿ: ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಲ ನೀಡಲಿರುವ ವಿಶ್ವಬ್ಯಾಂಕ್

ಶುಕ್ರವಾರ, 1 ಜುಲೈ 2016 (19:03 IST)
2022 ರ ವೇಳೆಗೆ  1 ಲಕ್ಷ ಮೆಗಾ ವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆ ಯೋಜನೆಗೆ ವಿಶ್ವ ಬ್ಯಾಂಕ್ ಭಾರತಕ್ಕೆ 1 ಬಿಲಿಯನ್ ಡಾಲರ್ ಸಾಲವನ್ನು ನೀಡಲು ಮುಂದಾಗಿದೆ. ವಿಶ್ವಬ್ಯಾಂಕ್ ಮೊದಲ ಬಾರಿಗೆ ಗರಿಷ್ಠ ಮೊತ್ತದ ಸಾಲವನ್ನು ಸೋಲಾರ್ ಯೋಜನೆಗೆ ನೀಡಿದೆ. 
 
ಈ ಯೋಜನೆಗಳು ಸೌರ ಮೇಲ್ಛಾವಣಿಯ ತಂತ್ರಜ್ಞಾನ, ಸೌರ ಉದ್ಯಾನವನಗಳ ಮೂಲಭೂತ ಸೌಕರ್ಯ, ಮಾರುಕಟ್ಟೆಗೆ ನಾವಿನ್ಯ ಸೌರಶಕ್ತಿ ಮತ್ತು ಹೈಬ್ರಿಡ್ ತಂತ್ರಜ್ಞಾನದ ಬಿಡುಗಡೆ ಮತ್ತು ಸೌರ ಭರಿತ ರಾಜ್ಯಗಳ ಟ್ರಾನ್ಸ್‌ಮಿಷನ್ ಲೈನ್‌ಗಳನ್ನು ಒಳಗೊಂಡಿದೆ.
 
ಭಾರತ ಸರಕಾರ ರೂಪಿಸಿರುವ ಯೋಜನೆಗೆ 1 ಬಿಲಿಯನ್ ಡಾಲರ್ ಹಣ ನೀಡಲು ನಿರ್ಧರಿಸಿದ್ದು, 625 ಮಿಲಿಯನ್ ಡಾಲರ್‌ಗಳಲ್ಲಿ ಸೌರ ಮೇಲ್ಛಾವಣಿಯ ತಂತ್ರಜ್ಞಾನ ಯೋಜನೆಗಾಗಿ ಭಾರತ ಸರಕಾರದ ಜೊತೆ ಮಾಡಿಕೊಂಡ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಈ ಯೋಜನೆಯಲ್ಲಿ 40 ಮೆಗಾವ್ಯಾಟ್ ವಿದ್ಯುತ್ ಸ್ಥಾವರಕ್ಕಾಗಿ ಹಣಕಾಸು ನೆರವು ನೀಡಲಾಗುವುದು ವಿಶ್ವ ಬ್ಯಾಂಕ್ ಅಧ್ಯಕ್ಷ ಜಿಮ್ ಯಾಂಗ್ ಕಿಮ್ ಎಂದು ತಿಳಿಸಿದ್ದಾರೆ. 
 
ಸೋಲಾರ್ ಯೋಜನೆಗಾಗಿ ವಿಶ್ವಬ್ಯಾಂಕ್‌ನಿಂದ ಭಾರತ ಪಡೆದಷ್ಟು ಸಾಲವನ್ನು ವಿಶ್ವದ ಯಾವುದೇ ದೇಶ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.  
 
ಸೋಲಾರ್ ಯೋಜನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಬದ್ಧತೆಗೆ ನಾವು ಬೆಂಬಲ ವ್ಯಕ್ತಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
 
ಪ್ಯಾರಿಸ್‌ನಲ್ಲಿ ನಡೆದ ಕೋಪ್ 21 ಶೃಂಗಸಭೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ಹವಾಮಾನ ಬದಲಾವಣೆ ಜಾಗತಿಕ ಪ್ರಯತ್ನಗಳಿಗೆ ಭಾರತ ಬೆಂಬಲ ಸೂಚಿಸಿ ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ 
 
ಭಾರತ ಸೇರಿದಂತೆ 121 ದೇಶಗಳ ಇಂಟರ್ನ್ಯಾಷನಲ್ ಸೋಲಾರ್ ಅಲೈಯನ್ಸ್ ಒಪ್ಪಂದಗಳಿಗೆ ವಿಶ್ವ ಬ್ಯಾಂಕ್ ಸಹಿ ಹಾಕಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ