ಕ್ಸಿಯೋಮಿಯಿಂದ ಮಿ. ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ

ಗುರುವಾರ, 30 ಜೂನ್ 2016 (15:42 IST)
ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಕ್ಸಿಯೋಮಿ, ಎಮ್‌ಐ ಮ್ಯಾಕ್ಸ್ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೆ ವೇಳೆ, ಎಮ್‌ಐಯುಐ-8ರ ಆರ್‌ಒಎಂ ಆವೃತ್ತಿಯನ್ನು ಜಾಗತಿಕವಾಗಿ ಅನಾವರಣಗೊಳಿಸಿದೆ. 
 
ಕಳೆದ ವಾರ ಎಂಐ ಕಮ್ಯೂನಿಟಿಯನ್ನು ಆರಂಭಿಸಿದ್ದ ಸಂಸ್ಥೆ, ಕಮ್ಯೂನಿಟಿಯಲ್ಲಿರುವ ಸದಸ್ಯರು ಮರುಮಾಹಿತಿ ಹಂಚಿಕೆ,ಸ್ಪರ್ಧೆಗಳಲ್ಲಿ ಭಾಗವಹಿಸುವಿಕೆ ಹಾಗೂ ದೇಶಾದ್ಯಂತ ಕ್ಸಿಯೋಮಿ ಕಂಪೆನಿಯ ಉದ್ಘಾಟನಾ ಸಮಾರಂಭಗಳಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಕಂಪೆನಿ ತಿಳಿಸಿದೆ. 
 
ಪ್ರಸ್ತುತ, ಕ್ಸಿಯೋಮಿ ಸಂಸ್ಥೆಯ ಅತೀ ದೊಡ್ಡ ಮೊಬೈಲ್ ಪೋನ್‌ಗಳಾಗಿರುವ ಎಮ್‌ಐ (ಮಿ) ಆವೃತ್ತಿಯ ಪೋನ್‌ಗಳು, ಈ ಮೊದಲು ಚೀನಾ ಮಾರುಕಟ್ಟೆಗೆ ಬಿಡುಗಡೆಗೊಂಡಿದ್ದವು. ಈ ಆವೃತ್ತಿಯ ಪೋನ್‌ಗಳು 6.44 ಇಂಚ್ ಫುಲ್-ಎಚ್‌ಡಿ (1080x1920) 342ಪಿಪಿಐ ಡಿಸ್‌ಪ್ಲೇ, ಫಿಂಗರ್ಪ್ರಿಂಟ್ ಸ್ಕ್ಯಾನರ್ ವೈಶಿಷ್ಟ್ಯ ಒಳಗೊಂಡಿದೆ.
 
ಸಂಪೂರ್ಣವಾಗಿ ಮೆಟಲ್ ಬಾಡಿ ಹೊಂದಿರುವ ಈ ಪೋನ್‌ಗಳು, ಗ್ರಾಹಕರಿಗೆ ಡಾರ್ಕ್ ಗ್ರೇ, ಗೋಲ್ಡ್ ಮತ್ತು ಸಿಲ್ವರ್ ಬಣ್ಣದಲ್ಲಿ ಲಭ್ಯವಾಗಲಿದೆ. 
 
ಕ್ಸಿಯೋಮಿ ಎಮ್‌ಐ ಆವೃತ್ತಿಯ ಪೋನ್‌ಗಳು ಮೂರು ಆವೃತ್ತಿಯಲ್ಲಿ ಚೀನಾ ಮಾರುಕಟ್ಟೆಗೆ ಬಿಡುಗಡೆ ಹೊಂದಿದ್ದು, 3 ಜಿಬಿ ರ್ಯಾಮ್, 32 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8 ಜಿಎಚ್‌ಝಡ್ ಹೆಕ್ಸಾ-ಕೋರ್ ಸ್ನಾಪ್ಡ್ರಾಗನ್ 650 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು ಗ್ರಾಹಕರಿಗೆ 15 ಸಾವಿರ ರೂಪಾಯಿಗಳಲ್ಲಿ ಲಭ್ಯವಿದ್ದು, 
 
3 ಜಿಬಿ ರ್ಯಾಮ್, 64 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು 1.8ಜಿಎಚ್‌ಝಡ್ ಆಕ್ಟಾ ಕೋರ್ ಸ್ನಾಪ್ಡ್ರಾಗನ್ 652 ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 17 ಸಾವಿರ ರೂಪಾಯಿ ಮತ್ತು 4 ಜಿಬಿ ರ್ಯಾಮ್, 128 ಜಿಬಿ ಸ್ಟೋರೇಜ್ ಸಾಮರ್ಥ್ಯ ಮತ್ತು ಸ್ನಾಪ್ಡ್ರಾಗನ್ 652  ಪ್ರೊಸೆಸರ್ ವೈಶಿಷ್ಟ್ಯ ಹೊಂದಿರುವ ಪೋನ್‌ಗಳು 20,500 ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ.
 
ಕ್ಸಿಯೋಮಿ ಎಮ್‌ಐ ಮ್ಯಾಕ್ಸ್ ಸ್ಫೋರ್ಟ್ಸ್ ಆವೃತ್ತಿಯ ಪೋನ್‌ಗಳು ಎಫ್/2.0 ಅಪಾರ್ಚರ್, ಪಿಡಿಎಎಫ್‌ ಮತ್ತು ಎಲ್‌ಇಡಿ ಫ್ಲ್ಯಾಶ್ ಜೊತೆಗೆ 16 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು ಎಫ್/2.0 ಅಪಾರ್ಚರ್, 85 ಡಿಗ್ರಿ ವೈಡ್ ಆಂಗಲ್ ವಿವ್ ಜೊತೆಗೆ 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ