ಬೆಂಗಳೂರಿನ ಕಂಪನಿ ಬುಕ್‌ಪ್ಯಾಡ್ ಯಾಹೂ ತೆಕ್ಕೆಗೆ....!

ಮಂಗಳವಾರ, 23 ಸೆಪ್ಟಂಬರ್ 2014 (11:45 IST)
ಪ್ರತಿಷ್ಠಿತ ಜನಪ್ರಿಯ ಕಂಪನಿಯಾದ ಯಾಹೂ ಅಂತರ್ಜಾಲ ತಾಣ ಬೆಂಗಳೂರಿನ ಕಂಪನಿಯೊಂದನ್ನು ಖರೀದಿ ಮಾಡಿದೆ.

ಇದೇ ಮೊದಲ ಬಾರಿಗೆ ಯಾಹೂ ಅಂತರ್ಜಾಲ ತಾಣ ಭಾರತೀಯ ಕಂಪನಿಯೊಂದನ್ನು ಖರೀದಿಸಿದೆ. ಬುಕ್‌ಪ್ಯಾಡ್ ಎಂಬ ಹೆಸರಿನ ಕಂಪನಿಯೊಂದಿಗೆ ಯಾಹೂ ಮಾಡಿಕೊಂಡ ಖರೀದಿ ಒಪ್ಪಂದ ಸುಮಾರು 50 ಕೋಟಿ ರೂಪಾಯಿ. 
 
ಯಾಹೂ ಈವರೆಗೆ ಸರಿಸುಮಾರು 100 ಕಂಪನಿಗಳನ್ನು ಖರೀದಿ ಮಾಡಿಕೊಂಡಿದೆ. ಬುಕ್‌ಪ್ಯಾಡ್ ಕಂಪನಿಯ ತಂತ್ರಜ್ಞರ ತಂಡ ಯಾಹೂ ವ್ಯಾಪ್ತಿಗೆ ಒಳಪಡಲಿದ್ದು, ಕಂಪನಿಯ ಎಲ್ಲ ಉದ್ಯೋಗಿಗಳು ಅಮೆರಿಕಾದ ಸಿಲಿಕಾನ್ ವ್ಯಾಲಿಗೆ ಸ್ಥಳಾಂತರಗೊಳ್ಳಲಿದ್ದಾರೆ ಎನ್ನಲಾಗುತ್ತಿದೆ. 
 
ದೊಡ್ಡ ಸಂಸ್ಥೆಗಳಾದ ಆಟೋಡೆಸ್ಕ್ ಮತ್ತು ಡ್ರಾಪ್‌ಬಾಕ್ಸ್ ಕೂಡಾ ಬುಕ್‌ಪ್ಯಾಡ್ ಖರೀದಿಸುವ ಹವಣಿಕೆಯಲ್ಲಿದ್ದವು.

ವೆಬ್ದುನಿಯಾವನ್ನು ಓದಿ