ಯೂಟ್ಯೂಬ್‌ನಿಂದ ಇಂಟರ್ನೆಟ್ ಟೆಲಿವಿಷನ್ ಸೇವೆ, ವರದಿ

ಗುರುವಾರ, 5 ಮೇ 2016 (15:35 IST)
ವೀಡಿಯೊ ಸೇವೆ ನೀಡುತ್ತಿರುವ ಯೂಟ್ಯೂಬ್, ಇಂಟರ್ನೆಟ್ ಟೆಲಿವಿಷನ್ ಸೇವೆ ನೀಡಲು ಯೋಜಿಸುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿಗಳು ತಿಳಿಸಿವೆ.
ಈ ಹೊಸ ಯೋಜನೆಯ ಕುರಿತು ಯೂಟ್ಯೂಬ್ ಅಧಿಕಾರಿಗಳು ಪ್ರಮುಖ ಮಾಧ್ಯಮ ಸಂಸ್ಥೆಗಳಾದ ವೈಕಾಮ್, ಎನ್‌ಬಿಸಿ ಯುನಿವರ್ಸಲ್ ಮತ್ತು ಟ್ವೆಂಟಿಫಸ್ಟ್ ಸೆಂಚುರಿ ಫಾಕ್ಸ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಗೂಗಲ್ ಒಡೆತನದ ಯೂಟುಬ್, ಹೆಚ್ಚಿನ ವಿಕ್ಷಕರನ್ನು ಆಕರ್ಷಿಸಿದ್ದು, ವೀಡಿಯೊ ಸೇವೆ ನೀಡುತ್ತಿರುವ ಸೈಟ್‌ಗಳಲ್ಲಿ  ಅಗ್ರ ಸ್ಥಾನವನ್ನು ಪಡೆದುಕೊಂಡಿದೆ.
 
ಯೂಟುಬ್ ಸಂಸ್ಥೆ, ಕಳೆದ ವರ್ಷ ಅಮೆರಿಕಾದ ಬಳಕೆದಾರರು 10 ಡಾಲರ್ ಪಾವತಿ ಮಾಡುವ ಮೂಲಕ ಒಂದು ತಿಂಗಳು ಅಪರಿಮಿತ ಉಚಿತ ವೀಡಿಯೊಗಳನ್ನು ಆನಂದಿಸಬಹುದಾದ ರೆಡ್ ಸೇವೆಯನ್ನು ಅನಾವರಣಗೊಳಿಸಿತ್ತು,

ವೆಬ್ದುನಿಯಾವನ್ನು ಓದಿ