ಇನ್ನು ಯೂಟ್ಯೂಬ್‍ನಲ್ಲಿ ಮೊಬೈಲ್ ಲೈವ್ ಸ್ಟ್ರೀಮಿಂಗ್

ಶುಕ್ರವಾರ, 10 ಫೆಬ್ರವರಿ 2017 (16:04 IST)
ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟ್ಟರ್‌ಗಳಲ್ಲಿರುವಂತೆ ಯೂಟ್ಯೂಬ್‌ ಕೂಡ ಮೊಬೈಲ್ ಲೈವ್ ಸ್ಟ್ರೀಮಿಂಗ್ ಆರಂಭಿಸಿದೆ. ಸುಮಾರು 10,000 ಮಂದಿ ಫಾಲೋವರ್ಸ್ ಇರುವ ಚಾನೆಲ್‌ನವರು ಈ ಸೌಲಭ್ಯವನ್ನು ಬಳಸಿಕೊಳ್ಳಬಹುದು. 
 
ಶೀಘ್ರದಲ್ಲೇ ಈ ಸೌಲಭ್ಯವನ್ನು ಎಲ್ಲರಿಗೂ ಲಭ್ಯವಾಗುವಂತೆ ಪ್ರಯತ್ನಿಸುತ್ತಿರುವುದಾಗಿ ಕಂಪೆನಿ ತಿಳಿಸಿದೆ. ಯೂಟ್ಯೂಬ್ ಮೊಬೈಲ್ ಆಪ್ ಮೂಲಕ ಈ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ. ಸಾಮಾನ್ಯವಾಗಿ ಅಪ್‌ಲೋಡ್ ಮಾಡುವ ವಿಡಿಯೋಗೆ ಇರುವ ಆಯ್ಕೆಗಳೇ ಇದಕ್ಕೂ ಇರುತ್ತವೆ ಎಂದು ಕಂಪೆನಿ ತಿಳಿಸಿದೆ.
 
ಮೊಬೈಲ್ ಆಪ್‌ನಲ್ಲಿನ ಮಾನಿಟೈಜೇಷನ್ ಟೂಲ್ ಸೂಪರ್ ಚಾಟ್ ಮೂಲಕ ಹಣ ಕೂಡ ಸಂಪಾದಿಸಿಕೊಳ್ಳಬಹುದೆಂದು ಯೂಟ್ಯೂಬ್ ತಿಳಿಸಿದೆ. ಇನ್ನು ಮುಂದೆ ಸೆಲೆಬ್ರಿಟಿಗಳು, ಕಾರ್ಯಕ್ರಮಗಳಿಗೆ ಟಿವಿ ಚಾನೆಲ್‌ಗಳಿಗಿಂತ ಯೂಟ್ಯೂಬ್ ಲೈವ್ ಸ್ಟ್ರೀಮಿಂಕ್ ಹೆಚ್ಚು ಜನಪ್ರಿಯವಾಗಬಹುದು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ