ಪರಿಚಯಕ್ಕಾಗಿ ತರುಣ್ ಗೆಟಪ್ ಬದಲಿಸಿದ್ದರೆ, ಬುದ್ದಿವಂತನಾಗಲು ಉಪೇಂದ್ರ ವಿಭಿನ್ನ ಗೆಟಪ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಪ್ರಜ್ವಲ್ ದೇವರಾಜ್ ಸರದಿ.
ಉದ್ದ ಕೂದಲು, ಕಣ್ಣಿಗೆ ಕಾಡಿಗೆ, ಹಣೆಗೆ ವಿಭೂತಿ ಧರಿಸಿ ಪ್ರಜ್ವಲ್ ದೇವರಾಜ್ ಸ್ಮಶಾನ ಕಾಯುತ್ತಿದ್ದಾರೆ. 'ನನ್ನವನು' ಚಿತ್ರಕ್ಕಾಗಿ ಈ ವೇಷ ಧರಿಸಿದ್ದಾರೆ.
ಪ್ರಜ್ವಲ್ ಕೈಲಿ ಈಗ ಸಾಕಷ್ಟು ಪ್ರಾಜೆಕ್ಟ್ಗಳಿವೆ. ಅತ್ತ ಕೆಂಪ ಚಿತ್ರ ಕೊನೆಯ ಹಂತದಲ್ಲಿದ್ದರೆ, ಇತ್ತ ಗುಲಾಮ ಚಿತ್ರೀಕರಣ ಭರದಿಂದ ಸಾಗಿದೆ. ಇದೇ ವೇಳೆ ನನ್ನವನು ಚಿತ್ರ ಕೂಡ ಭರ್ಜರಿ ಶೂಟಿಂಗ್ ನಡೆಯುತ್ತಿದೆ. ಒಟ್ಟಿನಲ್ಲಿ ಮೊದಲ ಚಿತ್ರ ಹೇಳಿಕೊಳ್ಳುವಂತಹ ಯಶ ಗಳಿಸದಿದ್ದರೂ, ಪ್ರಜ್ವಲ್ರನ್ನು ಪ್ರೇಕ್ಷಕ ಗುರುತಿಸಿದ್ದಾನೆ.