ದೀಪಿಕಾ ಪಡುಕೋಣೆ ತಲೆಗೆ ಐದು ಕೋಟಿ ಘೋಷಣೆ: ಪದ್ಮಾವತಿ ನಟಿಗೆ ಈಗ ಏಳು ಸುತ್ತಿನ ಕೋಟೆ
ಈ ಹಿನ್ನಲೆಯಲ್ಲಿ ನಟಿಯ ಸುತ್ತ ಭದ್ರತೆ ಹೆಚ್ಚಿಸಲಾಗಿದೆ. ಛತ್ರಿಯ ಸಮಾಜದ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಠಾಕೂರ್ ಅಭಿಷೇಕ್ ಸೋಮ್ ರುಂಡ ಕತ್ತರಿಸುವವರಿಗೆ 5 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಅನಾಹುತವಾಗುವ ಮೊದಲು ದೇಶ ಬಿಟ್ಟು ತೆರಳುವಂತೆ ದೀಪಿಕಾಗೆ ಬೆದರಿಕೆ ಹಾಕಿದ್ದಾರೆ.
ಡಿಸೆಂಬರ್ 1 ರಂದು ಈ ಸಿನಿಮಾ ಬಿಡುಗಡೆಯಾಗಬೇಕಿದ್ದು, ಈಗಾಗಲೇ ರಜಪೂತ್ ಕರ್ಣಿ ಸೇನೆ ಆ ದಿನ ಭಾರತ ಬಂದ್ ಗೆ ಕರೆ ನೀಡಿದೆ.