ಅಭಿಷೇಕ್ ಅಂಬರೀಶ್-ಅವಿವಾ ನಿಶ್ಚಿತಾರ್ಥ ಇಂದು: ಆಪ್ತರು ಮಾತ್ರ ಭಾಗಿ

ಭಾನುವಾರ, 11 ಡಿಸೆಂಬರ್ 2022 (09:30 IST)
ಬೆಂಗಳೂರು: ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಮಾಡೆಲ್ ಅವಿವಾ ಬಿದ್ದಪ್ಪಾ ಇಂದು ವಿವಾಹ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

ಖ್ಯಾತ ಫ್ಯಾಶನ್ ಡಿಸೈನರ್ ಪ್ರಕಾಶ್ ಬಿಡ್ಡಪ್ಪಾ ಪುತ್ರಿಯಾಗಿರುವ ಅವಿವಾ ಜೊತೆ ಅಭಿಷೇಕ್ ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಇದಕ್ಕೆ ಎಲ್ಲಾ ತಯಾರಿಗಳೂ ನಡೆದಿವೆ.

ಕೇವಲ ಆಪ್ತರ ಬಳಗದವರಿಗೆ ಮಾತ್ರ ಸುಮಲತಾ ಅಂಬರೀಶ್ ಆಹ್ವಾನ ನೀಡಿದ್ದಾರೆ. ಇಂದು ವಿವಾಹ ದಿನಾಂಕವೂ ಘೋಷಣೆಯಾಗುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ