ನಟ ಧನುಶ್`ಗೆ ಮದ್ರಾಸ್ ಹೈಕೋರ್ಟ್`ನಿಂದ ಬಿಗ್ ರಿಲೀಫ್

ಶುಕ್ರವಾರ, 21 ಏಪ್ರಿಲ್ 2017 (22:33 IST)
ಧನುಶ್ ತಮ್ಮ ಮಗನೆಂದು ಹೇಳಿಕೊಂಡು 60 ಸಾವಿರ ರೂ. ಜೀವನಾಂಶ ಕೊಡಿಸುವಂತೆ ಮೇಲೂರ್ ಕೋರ್ಟ್`ನಲ್ಲಿ ವೃದ್ಧ ದಂಪತಿ ಹೂಡಿದ್ದ ದಾವೆಯನ್ನ ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ. ದಾವೆ ವಜಾಗೆ ಕೋರಿ ಧನುಶ್ ಸಲ್ಲಿಸಿದ್ದ ಅರ್ಜಿಯನ್ನ ಕೋರ್ಟ್ ಪುರಸ್ಕರಿಸಿದೆ.

ಕೆ, ಕತ್ತಿರೇಶನ್(65) ಮತ್ತು ಕೆ.ಮೀನಾಕ್ಷಿ(53) ಎಂಬುವವರು ಧನುಶ್ ನಮ್ಮ ಮಗ. 2002ರಲ್ಲಿ ಸ್ಕೂಲ್ ಬಿಟ್ಟು ಸಿನಿಮಾ ನಟನೆ ಹುಚ್ಚಿನಿಂದ ಚೆನ್ನೈಗೆ ಬಂದಿದ್ದ. ತನ್ನ ಕಲೈಚೆಲ್ವನ್ ಹೆಸರನ್ನ ಧನುಶ್ ಎಂದು ಬದಲಿಸಿಕೊಂಡಿದ್ದಾನೆ. ನಾವು ಅವನ ಹೆತ್ತ ತಂದೆ-ತಾಯಿಯಾಗಿದ್ದು, ತಿಂಗಳಿಗೆ 60 ಸಾವಿರ ಜೀವನಾಂಶ ಕೊಡಿಸಬೇಕೆಂದು ಕೋರಿದ್ದರು.

ಇದಕ್ಕೆ ಪ್ರತಿಯಾಗಿ ದಾಖಲೆ ಸಲ್ಲಿಸಿದ್ದ ಧನುಶ್, ಕೃಷ್ಣಮೂರ್ತಿ ಮತ್ತು ಕೆ. ವಿಜಯಲಕ್ಷ್ಮೀ ಮಗನಾಗಿ 1983, ಜುಲೈ 28ರಂದು ಜನಿಸಿದ್ದೇನೆ. ವೆಂಗದೇಶ ಪ್ರಭು ಎಂದು ನನಗೆ ಹೆಸರಿಟ್ಟರು. ಬಳಿಕ ಅದನ್ನ ಧನುಶ್ ಕೆ ರಾಜಾ ಎಂದು ಬದಲಿಸಿದರು. ನನ್ನ ಬಳಿ ಹಣ ಸುಲಿಗೆ ಮಾಡಲು ಈ ವೃದ್ಧ ದಂಪತಿಯನ್ನ ದಾಳವಾಗಿ ಬಳಸುತ್ತಿದ್ದಾರೆ. ನನ್ನ ಪ್ರೈವೆಸಿ ದೃಷ್ಟಿಯಿಂದ ಡಿಎನ್`ಎ ಪರೀಕ್ಷೆ ನಡೆಸುವುದು ಸೂಕ್ತವಲ್ಲ ಎಂದು ವಾದಿಸಿದ್ದರು.

ವೆಬ್ದುನಿಯಾವನ್ನು ಓದಿ