ನಟ ಸೂರ್ಯ ಮತ್ತು ನಟಿ ಅಪರ್ಣ ನಟಿಸಿದ ಚಿತ್ರ ಸುರೈ ಪೊಟ್ರು ನವೆಂಬರ್ 12ರಂದು ಒಟಿಟಿಯಲ್ಲಿ ಬಿಡುಗಡೆಯಾಗಿ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟಿ ಅರ್ಪಣ ನಟನೆ ಬಗ್ಗೆ ಕೂಡ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟಿ ಅರ್ಪಣ ತಮ್ಮ ಸಂಭಾವನೆ ಹೆಚ್ಚಿಸಿದ್ದು, ಅವರ ಮುಂದಿನ ಚಿತ್ರಕ್ಕಾಗಿ ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ.