ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ತೆಲುಗು ಚಿತ್ರರಂಗಕ್ಕೆ ಬಂದ ನಂತರ ಕಾಂಪ್ರಮೈಜ್ ಆದ ನಟಿಯರಿಗೆ ಮಾತ್ರ ಅವಕಾಶ ನೀಡುವುದು, ಇಲ್ಲಾಂದ್ರೆ ಚಿತ್ರದಿಂದ ತೆಗೆದುಹಾಕಿದ ಅನೇಕ ಘಟನೆಗಳನ್ನು ನಾನು ನೋಡಿದ್ದೇನೆ. ತಮಿಳು ಚಿತ್ರರಂಗದಲ್ಲಿ ಮಣಿರತ್ನಂ, ಬಾಲಚಂದರ್, ಬಾಲು ಮಹೇಂದ್ರ, ಕೆ.ವಿಶ್ವನಾಥ್‌ರಂತಹ ನಿರ್ದೇಶಕರು ಪ್ರತಿಭೆಯಿದ್ದ ನಟನಟಿಯರಿಗೆ ಅವಕಾಶ ನೀಡ್ತಾರೆ. ಇಲ್ಲಾಂದ್ರೆ ಹೊಸಬರಿಗೆ ಅವಕಾಶ ನೀಡ್ತಾರೆ. ತೆಲುಗು ಚಿತ್ರರಂಗದಲ್ಲಿ ಅಂತಹ ಪರಿಸ್ಥಿತಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಾಂಪ್ರಮೈಜ್ ಆದ್ರೆ ಮಾತ್ರ ಅವಕಾಶ. ಇಲ್ಲಾಂದ್ರೆ ನೆರೆಯ ರಾಜ್ಯಗಳ ನಟಿಯರಿಗೆ ಅವಕಾಶ ನೀಡ್ತಾರೆ. ತೆಲುಗು ಚಿತ್ರರಂಗ ನಂಬಿ ಬಂದವರ ಗತಿಯೇನು ಎಂದು ಪ್ರಶ್ನಿಸಿದ ಅವರು, ತಾಯಿ, ತಂಗಿ, ಅತ್ತಿಗೆ, ಅಮ್ಮ ಪಾತ್ರಗಳಲ್ಲಿ ನಟಿಸುವುದಕ್ಕೆ ಇಲ್ಲಿ ಅನೇಕ ನಟಿಯರಿದ್ದಾರೆ. ಆದರೆ, ಬೇರೆ ರಾಜ್ಯಗಳಿಂದ ನಟಿಯರನ್ನು ಕರೆಸಿ ನಟನೆಗೆ ಅವಕಾಶ ನೀಡುವುದು ಯಾವ ನ್ಯಾಯ ಎಂದರು.