ಹೈದರಾಬಾದ್ : ನಟಿ ತಮನ್ನಾ ಭಾಟಿಯಾ ಈ ವರ್ಷ eleven o clock ವೆಬ್ ಸರಣಿಯ ಮೂಲಕ ಮೊದಲಬಾರಿಗೆ ಒಟಿಟಿಗೆ ಪ್ರವೇಶಿಸಿದ್ದಾರೆ. ಆದರೆ ಈ ಸರಣಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ.
ಆದರೆ ಇಷ್ಟಕ್ಕೆ ಸುಮ್ಮನಾಗದ ನಟಿ ತಮನ್ನಾ ಶೀಘ್ರದಲ್ಲಿಯೇ ಮತ್ತೊಂದು ವೆಬ್ ಸರಣಿಗೆ ಸಹಿ ಮಾಡಲಿದ್ದಾರೆ , ಇದನ್ನು ಆಹಾ ಅವರು ನಿರ್ಮಿಸಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಒಂದೆರಡು ವೆಬ್ ಚಿತ್ರಗಳಿಗಾಗಿ ಮಾತುಕತೆ ನಡೆಸಿದ ನಟಿ ತಮನ್ನಾ ಶೀಘ್ರದಲ್ಲಿಯೇ ಸಹಿ ಕೂಡ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಾರಿ ಪ್ರೇಕ್ಷಕರ ಮೆಚ್ಚುಗೆ ಪಡೆಯುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.