ವ್ಯಾಕ್ಸಿನ್ ಪಡೆದರೂ ಕೊರೋನಾಗೊಳಗಾದ ನಟಿ ತಾರಾ ಹೇಳಿದ್ದೇನು?
ಇನ್ನು ತಾರಾ ಈಗಾಗಲೇ ಒಂದು ಬಾರಿ ಕೊರೋನಾ ವ್ಯಾಕ್ಸಿನ್ ಪಡೆದುಕೊಂಡಿದ್ದರು. ಹಾಗಿದ್ದರೂ ತಮಗೆ ಕೊರೋನಾ ಬಂದಿರುವ ಬಗ್ಗೆ ಮಾತನಾಡಿರುವ ಅವರು ನಾನು ಒಂದು ಡೋಸ್ ಲಸಿಕೆ ಪಡೆದುಕೊಂಡಿದ್ದೆ. ಆದರೂ ನನಗೆ ಸೋಂಕು ಬಂದಿದೆ. ಆದರೆ ಲಸಿಕೆ ಪಡೆದುಕೊಂಡ ಕಾರಣ ನನಗೆ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಬಂದಿಲ್ಲ. ಲಸಿಕೆ ಪಡೆದುಕೊಂಡ ಕಾರಣ ನನಗೆ ಬೇಗನೇ ವಾಸಿಯಾಗಿದೆ ಎಂದಿದ್ದಾರೆ.