ಜಯಲಲಿತಾ ಪಾತ್ರಕ್ಕೆ ಜೀವ ತುಂಬಿದ್ದ ಐಶ್ವರ್ಯಾ ರೈ

ಶುಕ್ರವಾರ, 9 ಡಿಸೆಂಬರ್ 2016 (10:48 IST)
ಅರುವತ್ತು ಮತ್ತು ಎಪ್ಪತ್ತರ ದಶಕದಲ್ಲಿ ಬೆಳ್ಳಿತೆರೆ ಬೆಳೆಗಿದ ತಾರೆಗಳಲ್ಲಿ ಜಯಲಲಿತಾ ಕೂಡ ಒಬ್ಬರಾಗಿದ್ದರು. ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಅವರೊಬ್ಬ ಅಭಿನೇತ್ರಿಯಾಗಿದ್ದರು. ಅವರ ಜೀನದ ರಹಸ್ಯ ಅಷ್ಟಾಗಿ ಎಲ್ಲೂ ಸಿಗುವುದಿಲ್ಲ. 1997ರಲ್ಲಿ ಮಣಿರತ್ನಂ ಅವರ ನಿರ್ದೇಶನದಲ್ಲಿ ಬಂದಂತ ಇರುವರ್ ಚಿತ್ರ ಅವರ ಜೀವನದ ಕೆಲವೊಂದು ರಹಸ್ಯಗಳನ್ನ ಹೊರಹಾಕುತ್ತದೆ.
 
ಈ ಚಿತ್ರದಲ್ಲಿ ಮೋಹನ್ ಲಾಲ್ ಎಂಜಿ ರಾಮಚಂದ್ರನ್ ಆಗಿ ಕಾಣಿಸಿಕೊಂಡಿದ್ದರು. ಪ್ರಕಾಶ್ ರೈ ಅವರು ವಿರೋಧಿಯಾಗಿ ಅಭಿನಯಿಸಿದ್ದ ಚಿತ್ರ. ಆಗಷ್ಟೇ ಬೆಳ್ಳಿಪರದೆ ಅಡಿಯಿಟ್ಟಿದ್ದ ಐಶ್ವರ್ಯಾ ರೈ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಪಾತ್ರ ಜಯಲಲಿತಾ ಅವರಿಗೆ ಹೋಲುತ್ತಿತ್ತು.
 
ಮೊದಲ ಪಾತ್ರದಲ್ಲಿ ಅಪಘಾತದ ಕಾರಣ ಅವರು ಸಾವಪ್ಪುತ್ತಾರೆ. ಮೋಹನ್ ಲಾಲ್ ಜೊತೆ ಚುನಾವಣಾ ಪ್ರಚಾರದ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುತ್ತದೆ ಎರಡನೇ ಪಾತ್ರ. ಅದರ ಜೊತೆ ಅವರ ಜೊತೆಗಿನ ರೊಮ್ಯಾಂಟಿಕ್ ಸನ್ನಿವೇಶಗಳು ಇವೆ. ಈ ಚಿತ್ರ ಸಾಕಷ್ಟು ವಿವಾದಗಳಿಗೆ ಕಾರಣವಾಗಿತ್ತು.
 
ಜಯಲಲಿತಾ ಅವರ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಜಯಲಲಿತಾ ಅಭಿಮಾನಿಗಳು ಪ್ರತಿಭಟಿಸಿದ್ದರು. ಐಶ್ವರ್ಯ ರೈ ಪೋಷಿಸಿದ್ದ ಎರಡನೇ ಪಾತ್ರ ಜಯಲಲಿತಾ ಅವರ ಬದುಕಿಗೆ ತುಂಬಾ ಹತ್ತಿರವಾಗಿತ್ತು. ಆದರೆ ಇರುವರ್ ಚಿತ್ರ ಬಾಕ್ಸಾಫೀಸಲ್ಲಿ ದಯನೀಯ ಸೋಲು ಕಂಡಿತು. ಮಣಿರತ್ನಂ ಅವರ ಅತ್ಯುತ್ತಮ ಚಿತ್ರಗಲ ಸಾಲಿನಲ್ಲಿ ಇದೂ ನಿಲ್ಲುತ್ತದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ