ಹಾಲಿವುಡ್ ಸ್ಟಾರ್ ಬ್ರಾಡ್ ಪಿಟ್ ಜತೆ ಅಭಿನಯಿಸಲು ಒಲ್ಲೆ ಎಂದಿದ್ದ ಐಶ್ವರ್ಯಾ ರೈ
ಶುಕ್ರವಾರ, 17 ಜುಲೈ 2020 (09:51 IST)
ಮುಂಬೈ: ಬಾಲಿವುಡ್ ಬೆಡಗಿ ಐಶ್ವರ್ಯಾ ರೈ ಹಾಲಿವುಡ್ ಸಿನಿಮಾಗಳಲ್ಲೂ ನಟಿಸಿ ಹೆಸರು ಮಾಡಿದ್ದವರು. ಆದರೆ ಒಂದೊಮ್ಮೆ ಹಾಲಿವುಡ್ ಸ್ಟಾರ್ ನಟ ಬ್ರಾಡ್ ಪಿಟ್ ಜತೆಗೆ ನಟಿಸುವ ಅವಕಾಶವನ್ನು ಒಲ್ಲೆ ಎಂದಿದ್ದರಂತೆ ಐಶ್.
ಐಶ್ ಜತೆಗೆ ತನಗೆ ನಟಿಸಲು ಅವಕಾಶ ಸಿಗದೇ ಇದ್ದಿದ್ದಕ್ಕೆ ಬ್ರಾಡ್ ಪಿಟ್ ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದರಂತೆ. ಅವರಂತಹ ಸುಂದರಿ, ಪ್ರತಿಭಾವಂತ ನಟಿ ಜತೆ ನಟಿಸುವ ಆಸೆಯಿತ್ತು. ಆದರೆ ಆಕೆಯ ಜತೆ ನಟಿಸಲು ನನಗೆ ಭಾಗ್ಯವಿಲ್ಲದೇ ಹೋಯಿತು ಎಂದು ಪಿಟ್ ಹೇಳಿಕೊಂಡಿದ್ದರಂತೆ.