ಈ ಕಾರಣಕ್ಕೆ ಅಭಿಮಾನಿಗಳ ಮೇಲೆ ಕೋಪಗೊಂಡ ನಟ ಅಜಿತ್

ಬುಧವಾರ, 7 ಏಪ್ರಿಲ್ 2021 (10:47 IST)
ಚೆನ್ನೈ : ನಿನ್ನೆ ತಮಿಳುನಾಡಿನ ಚುನಾವಣೆ ನಡೆದಿದ್ದು, ಹಲವಾರು ಚಿತ್ರರಂಗದ ತಾರೆಯರು ತಮ್ಮ ಮತಗಳನ್ನು ಚಲಾಯಿಸಿದ್ದಾರೆ. ಆ ವೇಳೆ ಮತ ಹಾಕಲು ಬಂದ ಅಜಿತ್ ಅವರು  ಅಭಿಮಾನಿಗಳ ಮೇಲೆ ಕೋಪಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹೌದು. ನಟ ಅಜಿತ್ ಅವರು ಪತ್ನಿ ಶಾಲಿನಿ ಅವರ ಜೊತೆ ಮತ ಚಲಾಯಿಸಲು ಬಂದಾಗ ಅಭಿಮಾನಿಗಳು ಅವರನ್ನು ಸುತ್ತುವರಿದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಇದು ಸಾಕಷ್ಟು ಗದ್ದಲಕ್ಕೆ ಕಾರಣವಾಗಿದೆ. ಆ ವೇಳೆ ಅಜಿತ್ ಅಭಿಮಾನಿಯೊಬ್ಬರ ಪೋನ್ ನ್ನು ಕಿತ್ತುಕೊಂಡಿದ್ದಾರೆ.

ಬಳಿಕ ಎಚ್ಚರಿಕೆ ನೀಡಿ ಫೋನ್ ವಾಪಾಸು ನೀಡಿದ್ದಾರೆ ಮತ್ತು ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದಾರೆ.ಈ ಘಟನೆ ವಿವಾದಕ್ಕೆ ಕಾರಣವಾಗಿದ್ದು ಅಜಿತ್ ಈ ನಡತೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು  ಚರ್ಚೆಯಾಗುತ್ತಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ