ಕನ್ನಡಕ್ಕೆ ಡಬ್ ಆದ ಅಜಿತ್ ತಮಿಳು ಸಿನಿಮಾ

ಸೋಮವಾರ, 27 ಫೆಬ್ರವರಿ 2017 (12:40 IST)
ಸ್ಯಾಂಡಲ್‍ವುಡ್‌ನಲ್ಲಿ ಡಬ್ಬಿಂಗ್ ಸಿನಿಮಾಗಳ ಮೇಲಿನ ನಿಷೇಧ ತೆರೆವಾಗಿದೆಯೇ? ಅಜಿತ್ ಅಭಿನಯದ ತಮಿಳು ಚಿತ್ರ ’ಎನ್ನೈ ಅರಿಂದಾಳ್’ ಕನ್ನಡಕ್ಕೆ ಡಬ್ ಆಗಿದ್ದು ಶೀಘ್ರದಲ್ಲೇ ತೆರೆಕಂಡರೂ ಅಚ್ಚರಿ ಪಡಬೇಕಾಗಿಲ್ಲ. ಅಜಿತ್ ಕನ್ನಡದಲ್ಲಿ ಡೈಲಾಗ್ ಹೇಳುವುದನ್ನು ಇನ್ನು ಮುಂದೆ ಕೇಳಬಹುದು.
 
ಕನ್ನಡದಲ್ಲಿ ಈ ಚಿತ್ರಕ್ಕೆ ಸತ್ಯದೇವ್ ಐಪಿಎಸ್ ಎಂದು ಹೆಸರಿಡಲಾಗಿದೆ. ಅನುಷ್ಕಾ ಶೆಟ್ಟಿ, ತ್ರಿಷಾ ಮತ್ತು ಅರುಣ್ ವಿಜಯ್ ಚಿತ್ರದ ಪಾತ್ರವರ್ಗದಲ್ಲಿದ್ದು ಗೌತಮ್ ಮೆನನ್ ಆಕ್ಷನ್ ಕಟ್ ಹೇಳಿದ್ದಾರೆ. ಅಂದಹಾಗೆ ಇದು ಹೊಸ ಚಿತ್ರವೇನಲ್ಲ. ಈ ಹಿಂದೆ ಬಿಡುಗಡೆಯಾಗಿ ಬಾಕ್ಸ್ ಆಫೀಸಲ್ಲಿ ಭರ್ಜರಿ ಸೌಂಡ್ ಮಾಡಿತ್ತು.
 
ಈಗ ಡಬ್ಬಿಂಗ್ ರೂಪದಲ್ಲಿ ಕನ್ನಡ ಬೆಳ್ಳಿಪರದೆಯನ್ನು ಅಲಂಕರಿಸುತ್ತಿದೆ. ಕನ್ನಡದಲ್ಲಿ ಡಬ್ಬಿಂಗ್ ಮಂಡಳಿ ಬೇರೆ ಅಸ್ತಿತ್ವದಲ್ಲಿದೆ. ಒಂದು ಕಡೆ ಡಬ್ಬಿಂಗ್ ಸಿನಿಮಾಗಳು ಬೇಡ ಎಂಬ ವಿರೋಧ ಇದೆ, ಇನ್ನೊಂದು ಕಡೆ ಡಬ್ಬಿಂಗ್ ಪರ ಚಳುವಳಿಯೂ ನಡೆಯುತ್ತಿದೆ. ಈ ಗೊಂದಲದಲ್ಲಿ ತಮಿಳು ಸಿನಿಮಾ ಡಬ್ಬಿಂಗ್ ಆಗಿರುವುದನ್ನು ಸ್ಯಾಂಡಲ್‌ವುಡ್ ಹೇಗೆ ಸ್ವೀಕರಿಸುತ್ತದೆ ಅಂತ ಕಾದು ನೋಡಬೇಕಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ