ಡ್ರಗ್ ಕೇಸ್: ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಆಂಕರ್ ಅನುಶ್ರೀ ಹೆಸರು
ಈ ಸಂಬಂಧ ಈ ಹಿಂದೆ ಮಂಗಳೂರು ಸಿಸಿಬಿ ವಿಭಾಗ ಅನುಶ್ರೀ ವಿಚಾರಣೆ ನಡೆಸಿತ್ತು. ಅದಾದ ಬಳಿಕ ಪ್ರಕರಣ ತಣ್ಣಗಾಗಿತ್ತು. ಇದೀಗ ಸಿಸಿಬಿ ಚಾರ್ಜ್ ಶೀಟ್ ನಲ್ಲಿ ಅವರ ಹೆಸರು ಸೇರ್ಪಡೆಯಾಗಿರುವುದರಿಂದ ಅವರಿಗೆ ಮತ್ತೆ ಸಂಕಷ್ಟ ಎದುರಾಗಿದೆ.
ಅನುಶ್ರೀ ಡ್ಯಾನ್ಸ್ ಪ್ರಾಕ್ಟೀಸ್ ಗೆ ಬರುವಾಗ ಡ್ರಗ್ಸ್ ತರುತ್ತಿದ್ದರು. ಅವರಿಗೆ ಡ್ರಗ್ ಪೆಡ್ಲರ್ ಗಳ ಪರಿಚಯವಿತ್ತು. ಅವರಿಗೆ ಯಾರು ಡ್ರಗ್ಸ್ ಪೂರೈಸುತ್ತಾರೆಂದು ಗೊತ್ತಿತ್ತು ಎಂಬುದಾಗಿ ಆರೋಪಿ ಕಿಶೋರ್ ಶೆಟ್ಟಿ ಹೇಳಿದ್ದ.