ಮೀ ಟೂ ಆಪಾದಿತ ಸಾಹಿತಿ ಜತೆ ಕೆಲಸ ಮಾಡುತ್ತಿರುವುದಕ್ಕೆ ಟೀಕೆಗೊಳಗಾದ ಎಆರ್ ರೆಹಮಾನ್, ಮಣಿರತ್ನಂ

ಭಾನುವಾರ, 8 ಸೆಪ್ಟಂಬರ್ 2019 (07:12 IST)
ಚೆನ್ನೈ: ಭಾರತೀಯ ಸಿನಿಮಾದ ಮ್ಯಾಜಿಕಲ್ ಜೋಡಿ ಎಂದೇ ಹೇಳಬಹುದಾದ ನಿರ್ದೇಶಕ ಮಣಿರತ್ನಂ ಮತ್ತು ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಮತ್ತೆ ಜತೆಯಾಗಿ ಕೆಲಸ ಮಾಡುತ್ತಿದ್ದಾರೆ.


ಪೊನ್ನಿಯಿನ್ ಸೆಲ್ವನ್ ಎಂಬ ಸಿನಿಮಾ ನಿರ್ದೇಶಿಸುತ್ತಿರುವ ಮಣಿರತ್ನಂಗೆ ಸಂಗೀತ ನಿರ್ದೇಶಕರಾಗಿ ಎಆರ್ ರೆಹಮಾನ್ ಸಾಥ್ ನೀಡಲಿದ್ದಾರೆ. ಆದರೆ ಇವರಿಬ್ಬರೂ ತಮ್ಮ ಚಿತ್ರದ ಹಾಡುಗಳ ಸಾಹಿತ್ಯ ಬರೆಯಲು ಮೀ ಟೂ ಆಪಾದನೆಗೊಳಗಾದ ಸಾಹಿತಿ ವೈರಮುತ್ತು ಅವರಿಂದ ಸಾಹಿತ್ಯ ಬರೆಸುತ್ತಿರುವುದಕ್ಕೆ ನೆಟ್ಟಿಗರಿಂದ ಟೀಕೆಗೊಳಗಾಗಿದ್ದಾರೆ.

ಗಾಯಕಿ ಚಿನ್ಮಯಿ ವೈರಮುತ್ತು ವಿರುದ್ಧ ಮೀ ಟೂ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಇಂತಹ ವ್ಯಕ್ತಿ ಜತೆ ಕೆಲಸ ಮಾಡುವುದು ನಿಮಗೆ ಶೋಭೆಯೇ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಒಟ್ಟು 12 ಹಾಡುಗಳನ್ನು ಸೆಲ್ವನ್ ಬರೆಯಲಿದ್ದು, ಇದಕ್ಕೆ ಎಆರ್ ರೆಹಮಾನ್ ಸಂಗೀತ ಸಂಯೋಜಿಸಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ