ಚಿರು ಸರ್ಜಾ ಪುಣ್ಯದಿನದಂದು ದೊಡ್ಡ ನಿರ್ಧಾರ ಘೋಷಿಸಿದ ಅರ್ಜುನ್ ಸರ್ಜಾ
ಈ ವೇಳೆ ಮೇಘನಾ ಮತ್ತು ಕುಟುಂಬಸ್ಥರು ಚಿರು ನೆನೆದು ಭಾವುಕರಾದರು. ಇನ್ನು, ಚಿರು ಸರ್ಜಾ ಎರಡನೇ ವರ್ಷದ ಪುಣ್ಯತಿಥಿಗೆ ಮಾವ ಅರ್ಜುನ್ ಸರ್ಜಾ ಕೂಡಾ ಆಗಮಿಸಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಚಿರು ಪುತ್ರ ರಾಯನ್ ಬಗ್ಗೆ ಮಾತನಾಡಿರುವ ಅರ್ಜುನ್ ಸರ್ಜಾ ಚಿರು ಮಗ ನಮಗೆ ನೆಮ್ಮದಿ ಕೊಡುತ್ತಿದ್ದಾನೆ. ಚಿರು ಇಲ್ಲ ಎನ್ನುವ ಕೊರಗು ಸ್ವಲ್ಪ ಕಡಿಮೆ ಮಾಡಿದ್ದಾನೆ. ಚಿರುವನ್ನು ನಾವೇ ಲಾಂಚ್ ಮಾಡಿದ್ದೆವು. ಈಗ ಅವನ ಮಗನನ್ನೂ ನಾವೇ ಲಾಂಚ್ ಮಾಡುತ್ತೇವೆ ಎಂದಿದ್ದಾರೆ ಅರ್ಜುನ್ ಸರ್ಜಾ.