ಕೆಜಿಎಫ್ 2 ಟ್ರೈಲರ್ ಪುನೀತ್ ಗೆ ಅರ್ಪಿಸಿದ್ದಕ್ಕೆ ಪತ್ನಿ ಅಶ್ವಿನಿ ಪ್ರತಿಕ್ರಿಯೆ

ಬುಧವಾರ, 30 ಮಾರ್ಚ್ 2022 (17:15 IST)
ಬೆಂಗಳೂರು: ಮೊನ್ನೆಯಷ್ಟೇ ಬಿಡುಗಡೆಯಾಗಿರುವ ಕೆಜಿಎಫ್ 2 ಸಿನಿಮಾದ ಟ್ರೈಲರ್ ಭರ್ಜರಿ ಸೌಂಡ್ ಮಾಡುತ್ತಿದೆ.

ಈ ಟ್ರೈಲರ್ ನೋಡಿದ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೀಗ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡಾ ಕೆಜಿಎಫ್ 2 ಟ್ರೈಲರ್ ಮೆಚ್ಚಿದ್ದಾರೆ.

ಕೆಜಿಎಫ್ 2 ಟ್ರೈಲರ್ ಬಿಡುಗಡೆ ದಿನ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾ ಪುನೀತ್ ಗೆ ಅರ್ಪಣೆ ಎಂದಿದ್ದರು. ಇದೀಗ ಟ್ರೈಲರ್ ವೀಕ್ಷಿಸಿದ ಅಶ್ವಿನಿ ಪುನೀತ್ ‘ಕೆಜಿಎಫ್ 2 ಟ್ರೈಲರ್ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಶುಭಾಷಯಗಳು. ಸಿನಿಮಾವನ್ನು ಅಪ್ಪು ಅವರಿಗೆ ಅರ್ಪಿಸಿದ್ದಕ್ಕೆ ಧನ್ಯವಾದಗಳು’ ಎಂದಿದ್ದಾರೆ. ಇದಕ್ಕೆ ಪ್ರಶಾಂತ್ ನೀಲ್ ಕೂಡಾ ಪ್ರತಿಕ್ರಿಯಿಸಿ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ