ಕನ್ನಡದಲ್ಲಿ ಬರಲಿದೆ ಬಾಹುಬಲಿ ಸಿನಿಮಾ!
ಬೆಂಗಳೂರು: ಅರೇ ರಾಜಮೌಳಿ ನಿರ್ದೇಶನದ ಬಾಹುಬಲಿ ಕನ್ನಡದಲ್ಲಿ ಬರುತ್ತಾ? ಕನ್ನಡಕ್ಕೆ ಡಬ್ಬಿಂಗ್ ಮಾಡಲು ಚಿತ್ರರಂಗದವರು ಒಪ್ಪಿಕೊಂಡರಾ ಅಂತ ಕೇಳಿದರೆ ದೇವರಾಣೆ ಇಲ್ಲ. ಬಾಹುಬಲಿ ಎನ್ನುವ ನಿರ್ದೇಶಕರೊಬ್ಬರು ಹೊಸ ಸಿನಿಮಾ ಮಾಡ್ತಿದ್ದಾರೆ. ಅದಕ್ಕೆ ಈ ಒಕ್ಕಣೆ.
ನನ್ ಮಗಳೇ ಹೀರೋಯಿನ್ ಎನ್ನುವ ಕ್ಯಾಚಿ ಟೈಟಲ್ ಇಟ್ಟುಕೊಂಡು ಸಿನಿಮಾ ಮೂಡಿ ಬರುತ್ತಿದೆ. ಇದರ ನಿರ್ದೇಶಕರ ಹೆಸರು ಬಾಹುಬಲಿ. ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇದರಲ್ಲಿ ನಾಯಕರು. ಇನ್ನೊಂದು ಪ್ರಮುಖ ಆಕರ್ಷಣೆ ಬಿ.ಸಿ. ಪಾಟೀಲ್.
ಈ ಚಿತ್ರದ ಮುಹೂರ್ತ ಇಂದು ಬಸವನಗುಡಿ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ಇದೊಂದು ಪಕ್ಕಾ ಕಾಮೆಡಿ ಸಿನಿಮಾ ಎಂದು ಟೈಟಲ್ ಹೇಳುತ್ತಿದೆ. ಅಂತೂ ಸದಾ ವಿಭಿನ್ನ ಪಾತ್ರಗಳನ್ನು ಮಾಡುವ ವಿಜಯ್ ಇಲ್ಲೊಂದು ಕಾಮಿಡಿ ಪಾತ್ರ ಮಾಡಲು ಹೊರಟಿದ್ದಾರೆ.