ಬಿಬಿಕೆ9: ಈ ವಾರ ಮನೆಯಿಂದ ಹೊರಬಂದ ಮಯೂರಿ

ಸೋಮವಾರ, 24 ಅಕ್ಟೋಬರ್ 2022 (09:20 IST)
ಬೆಂಗಳೂರು: ಬಿಗ್ ಬಾಸ್ ಸೀಸನ್ 9 ರಲ್ಲಿ ಈ ವಾರ ನಟಿ ಮಯೂರಿ ಕ್ಯಾತರಿ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ನಿರೀಕ್ಷೆಯಂತೇ ಮಯೂರಿ ಈ ವಾರ ಮನೆಯಿಂದ ಹೊರಬಿದ್ದಿದ್ದಾರೆ. ಮಯೂರಿ ಕಳೆದ ಮೂರು ವಾರಗಳಲ್ಲೂ ಹೆಚ್ಚಾಗಿ ಸಕ್ರಿಯವಾಗಿರಲೇ ಇಲ್ಲ. ಈ ಕಾರಣಕ್ಕೆ ಅವರು ಮನೆಯಿಂದ ಹೊರಹೋಗಬಹುದು ಎಂದು ನಿರೀಕ್ಷಿಸಲಾಗಿತ್ತು.

ಅದರಂತೇ ಮಯೂರಿ ಮನೆಯಿಂದ ಹೊರಹೋಗಿದ್ದಾರೆ. ಈ ವಾರ ಕಿಚ್ಚ ಸುದೀಪ್ ಅನುಪಸ್ಥಿತಿಯಲ್ಲಿ ಎಲಿಮಿನೇಟ್ ಪ್ರಕ್ರಿಯೆ ನಡೆದಿದೆ.


-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ