ಬಿಗ್ ಬಾಸ್ ಕನ್ನಡ 9: ‘ಗೊಂಬೆ’ ನೇಹಾ ಮಾತಿನಿಂದ ಮಯೂರಿ ಕಣ್ಣೀರು!
ನೇಹಾ ಹೇಳಿದ ಮಾತು ಮಯೂರಿಗೆ ನೋವು ತಂದಿದ್ದು, ತನ್ನ ಆಪ್ತರ ಬಳಿ ಈ ವಿಚಾರ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮಯೂರಿ ಮೊದಲು ತಿಂದು ಎಲ್ಲರೂ ತಿಂದ ಮೇಲೆ ಮಿಕ್ಕಿದ್ದನ್ನು ತಿಂದು ಹಾಯಾಗಿರ್ತಾರೆ ಎನ್ನುವ ರೀತಿಯಲ್ಲಿ ನೇಹಾ ಮಾತಾಡಿದ್ದು, ಮಯೂರಿಗೆ ನೋವು ತರಿಸಿದೆ.
ಇದೇ ಕಾರಣಕ್ಕೆ ಮಯೂರಿ ಕಣ್ಣೀರು ಹಾಕಿದ್ದು, ಎಲ್ಲರ ಊಟ ಆದ ಮೇಲೆ ಕೊನೆಯಲ್ಲಿ ತಿಂದರೆ ಮಾತ್ರ ಒಳ್ಳೆಯವರಾ? ನಾನು ಇಲ್ಲಿ ರಿಲೇಷನ್ ಶಿಪ್ ಮಾಡಲು ಬಂದಿಲ್ಲ. ಎಲ್ಲರ ಹಾಗೇ ಆಡಲು ಬಂದಿದ್ದೇನೆ ಎಂದು ಕಣ‍್ಣೀರು ಹಾಕಿದ್ದಾರೆ. ಇದಕ್ಕೆ ನೇಹಾ ಕೂಡಾ ತನ್ನ ಗೆಳತಿ ಅನುಪಮಾ ಜೊತೆ ಅವರಿಗೆ ನೋವಾಗಬೇಕು ಎಂದು ನಾನು ಈ ಮಾತು ಹೇಳಿಲ್ಲ ಎಂದಿದ್ದಾರೆ. ಅಂತೂ ಊಟದ ವಿಚಾರಕ್ಕೆ ಎರಡೇ ದಿನಕ್ಕೆ ಮನೆಯಲ್ಲಿ ವಾರ್ ಶುರುವಾಗಿದೆ.