ಬಳ್ಳಾರಿ ದರ್ಬಾರ್ ಬರ್ತಾ ಇದೆ? ಏನೇನಿದಿಯೋ ಒಳಗೆ!

ಸೋಮವಾರ, 26 ಡಿಸೆಂಬರ್ 2016 (11:59 IST)
ಬಳ್ಳಾರಿಯಲ್ಲಿ ನಡೆದಂಥ ಘಟನೆಯನ್ನು ಆಧಾರವಾಗಿಟ್ಟುಕೊಂಡು ನಿರ್ಮಾಣವಾದ ಚಿತ್ರ “ಬಳ್ಳಾರಿ ದರ್ಬಾರ್” ಚಿತ್ರವು ಈ ವಾರ ಬಿಡುಗಡೆಯಾಗುತ್ತಿದೆ. ಬಳ್ಳಾರಿ ಎಂದರೆ ಸಾಮಾನ್ಯವಾಗಿ ಗಣಿ, ಕೆಲವು ರಾಜಕಾರಣಿಗಳ ದರ್ಬಾರ್ ಕಣ್ಣ ಮುಂದೆ ಬರುತ್ತದೆ. 
 
ಇದಕ್ಕೂ ಮುಂಚೆ ‘ತೂಫಾನ್’ ಎಂಬ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು ಈ ಚಿತ್ರದ ನಿರ್ದೇಶಕ ಸ್ಮೈಲ್ ಶ್ರೀನು. ಬಳಿಕ ಹೈದರಾಬಾದ್‌ನತ್ತ ಹೊರಳಿದ್ದರು. ಅಲ್ಲಿನ ಕೆಲ ನಿರ್ದೇಶಕರ ಬಳಿ ನಿರ್ದೇಶನದ ಮತ್ತಷ್ಟು ವರಸೆಗಳನ್ನು ಕಲಿತು ಬಂದಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಹಾಗೂ ನಿರ್ಮಾಣವೂ ಶ್ರೀನು ಅವರದ್ದೇ ಎಂಬುದು ವಿಶೇಷ.
 
‘ಸೇಡಿನ ಜತೆಗೆ ಪ್ರೀತಿಯ ದರ್ಬಾರ್ ಕೂಡ ಈ ಚಿತ್ರದಲ್ಲಿದೆ. ಬಳ್ಳಾರಿ ಸುತ್ತಮುತ್ತ 70 ದಿನ ಚಿತ್ರೀಕರಣ ನಡೆಸಲಾಗಿದ್ದು, ತೆಲುಗು ಚಿತ್ರಗಳಲ್ಲಿರುವ ಮಾಸ್ ಅಂಶಗಳು ಕಣ್ಮುಂದೆ ಬರುವಂತಿವೆ ಎನ್ನುತ್ತಾರೆ ಶ್ರೀನು. ಒಟ್ಟಾರೆ ಣಿಗಾರಿಕೆಯಿಂದ ಬಳ್ಳಾರಿಯ ಮೇಲೆ ಆಗಿರುವ ಪರಿಣಾಮದ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆಯಂತೆ. 
 
ಕಳೆದ 15 ವರ್ಷಗಳಿಂದ ಬಳ್ಳಾರಿಯಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಏನೆಲ್ಲಾ ನಡೆಯಿತು,  ನಂತರ ಅಲ್ಲಿ ಯಾವ ರೀತಿ ಬದಲಾವಣೆಯಾಗಿದೆ  ಎಂಬುದನ್ನು ನೈಜ ಘಟನೆಯನ್ನಾಧಾರಿಸಿ ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಸೈಲ್‌ ಶ್ರೀನು. ಕುತೂಹಲ ಮೂಡಿಸಿರುವ ಅಂಶ ಎಂದರೆ ಈ ಚಿತ್ರದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ ಇರ್ತಾರಾ ಅನ್ನೋದು? 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ