ನಿರ್ಮಾಪಕ ಉಮಾಪತಿಗೆ ಬೆದರಿಕೆ ಹಾಕಿದ್ದ ಬಾಂಬೆ ರವಿ
ಪ್ರಕರಣಕ್ಕೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬಾಂಬೆ ಸತ್ತರು ತನಿಖೆ ನಿಲ್ಲಿಸದ ಬೆಂಗಳೂರು ದಕ್ಷಿಣ ವಿಭಾಗದ ಪೊಲೀಸ್ರು, ಬಾಂಬೆ ರವಿಗೆ ಸಾಥ್ ನೀಡಿದ್ದ ಇಬ್ಬರು ಸಹಚರರನ್ನು ಬಂಧನ ಮಾಡಿದ್ದಾರೆ. ರ್ರಾಘವೇಂದ್ರ ಹಾಗೂ ಉದಯ್ ಬಂಧಿತ ಬಾಂಬೆ ರವಿ ಸಹಚರರು. ಆರೋಪಿಗಳು. ಉಮಾಪತಿ ಹಾಗೂ ಆತನ ಸಹೋದರ ದೀಪಕ್ ಹತ್ಯೆಗೆ ಸ್ಕೆಚ್ ಹಾಕಿ ಬಂಧನವಾದ ನಂತರ, ಪ್ರಮುಖ ಆರೋಪಿ ಕರಿಯ ರಾಜೇಶನ ಜೊತೆ ಸಂಪರ್ಕ ಹೊಂದಿದ್ದ ಆರೋಪಿಗಳು. ನಂತರ ಕೆಎಸ್ ಲೇಔಟ್ ನ ಹೋಟೆಲ್ ಒಂದರಲ್ಲಿ ಮೀಟಿಂಗ್ ಸಹ ಮಾಡಿದ್ರು ಎನ್ನಲಾಗಿದೆ. ಜೊತೆಗೆ ಬಾಂಬೆ ರವಿಯ ಹಫ್ತ ವಸೂಲಿ ದಂಧೆಯಲ್ಲಿ ಹಣವನ್ನ ಕಲೆಕ್ಟ್ ಮಾಡಿ, ರವಿಗೆ ಕಳುಹಿಸುತ್ತಿದ್ದ ಆರೋಪಿಗಳು, ಕಳೆದ ವರ್ಷ 10 ಲಕ್ಷ ಹಣವನ್ನ ರವಿಗೆ ಕಳುಹಿಸಿರೋದು ಪೊಲೀಸರ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.