ಟಾಲಿವುಡ್ ಸಿನಿಮಾವಾದರೂ ಲೈಗರ್ ವಿರುದ್ಧ ಬಹಿಷ್ಕಾರದ ಅಭಿಯಾನ!

ಶನಿವಾರ, 20 ಆಗಸ್ಟ್ 2022 (09:40 IST)
ಹೈದರಾಬಾದ್: ಇತ್ತೀಚೆಗೆ ಬಾಯ್ಕಾಟ್ ಎನ್ನುವ ಶಬ್ಧವೇ ಸಿನಿಮಾ ನಿರ್ಮಾಪಕರ ಎದೆಯಲ್ಲಿ ನಡುಕ ಶುರು ಮಾಡುತ್ತಿದೆ. ಇದಕ್ಕೆ ಕಾರಣ ಬಾಲಿವುಡ್ ನ ಸಾಲು ಸಾಲು ಸಿನಿಮಾಗಳು ಬಾಯ್ಕಾಟ್ ಟ್ರೆಂಡ್ ಗೊಳಗಾಗಿ ಸೋಲುತ್ತಿರುವುದು.

ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿರುದ್ಧ ಟ್ವಿಟರ್ ನಲ್ಲಿ ಬಹಿಷ್ಕಾರದ ಟ್ರೆಂಡ್ ಶುರುವಾಗಿದೆ. ಮೂಲತಃ ಟಾಲಿವುಡ್ ಸಿನಿಮಾವಾದರೂ ಬಹಿಷ್ಕಾರ ಯಾಕೆ ಎಂಬ ಪ್ರಶ್ನೆ ನಿಮಗೆ ಕಾಡಬಹುದು.

ಇದಕ್ಕೆ ಕಾರಣ, ಲೈಗರ್ ಸಿನಿಮಾವನ್ನು ಹಿಂದಿಯಲ್ಲಿ ಕರಣ್ ಜೋಹರ್ ಬಿಡುಗಡೆ ಮಾಡುತ್ತಿರುವುದು. ಕರಣ್ ಜೋಹರ್ ನೇತೃತ್ವದ ಧರ್ಮ ಪ್ರೊಡಕ್ಷನ್ಸ್ ಬಿಡುಗಡೆ ಮಾಡುತ್ತಿರುವುದರಿಂದ ನೆಟ್ಟಿಗರು ಬಾಯ್ಕಾಟ್ ಲೈಗರ್ ಸಿನಿಮಾ ಟ್ರೆಂಡ್ ಶುರು ಮಾಡಿಕೊಂಡಿದ್ದಾರೆ. ಆಗಸ್ಟ್ 25 ರಂದು ಸಿನಿಮಾ ಬಿಡುಗಡೆಯಾಗಲಿದ್ದು, ಈ ಟ್ರೆಂಡ್ ಬಾಕ್ಸ್ ಆಫೀಸ್ ಗಳಿಕೆ ಮೇಲೆ ಪರಿಣಾಮ ಬೀರುವ ಭೀತಿ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ