‘ಬದಲಾಗು ನೀನು’ ಸೆಲೆಬ್ರಿಟಿಗಳ ಕೊರೋನಾ ಹಾಡು ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್
ನಿರ್ದೇಶಕ ಪವನ್ ಒಡೆಯರ್ ಪರಿಕಲ್ಪನೆಯಲ್ಲಿ ಹರಿಕಷ್ಣ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ. ಈ ಹಾಡು ಕಳೆದ ವಾರವೇ ಬಿಡುಗಡೆಯಾಗಬೇಕಿತ್ತು. ಆದರೆ ಕೊನೆಯ ಕ್ಷಣದಲ್ಲಿ ಮುಂದೂಡಿಕೆಯಾಗಿತ್ತು. ಇದೀಗ ಇದೇ ಜೂನ್ 5 ರಂದು ಸಂಜೆ 5 ಗಂಟೆಗೆ ಹಾಡು ಬಿಡುಗಡೆಯಾಗಲಿರುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಡಿ ಬೀಟ್ಸ್ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಡು ಲಾಂಚ್ ಆಗಲಿದೆ.