ಹಲ್ಲೆ ವಿವಾದದ ಬಳಿಕ ಕುತೂಹಲ ಹುಟ್ಟುಹಾಕಿದ ಚಂದನ್ ಕುಮಾರ್ ಹೊಸ ಪೋಸ್ಟ್

ಸೋಮವಾರ, 1 ಆಗಸ್ಟ್ 2022 (16:05 IST)
ಬೆಂಗಳೂರು: ತೆಲುಗು ಧಾರವಾಹಿ ಸೆಟ್ ನಲ್ಲಿ ನಡೆದಿತ್ತು ಎನ್ನಲಾದ ಹಲ್ಲೆ ವಿಡಿಯೋ ವೈರಲ್ ಆದ ಬಳಿಕ ಇದೀಗ ಕಿರುತೆರೆ ನಟ ಚಂದನ್ ಕುಮಾರ್ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಪೋಸ್ಟ್ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ಕ್ಯಾಮರಾ ಮ್ಯಾನ್ ಗೆ ಮೊದಲು ಚಂದನ್ ಹಲ್ಲೆ ಮಾಡಿದ್ದರು. ಇದೇ ಕಾರಣಕ್ಕೆ ತಂತ್ರಜ್ಞರು ಅವರ ವಿರುದ್ಧ ತಿರುಗಿಬಿದ್ದಿದ್ದರು ಎನ್ನಲಾಗಿತ್ತು.  ಇದಕ್ಕೆ ಕಾರಣ ತಮ್ಮ ಅಮ್ಮನ ಅನಾರೋಗ್ಯದ ಬಗ್ಗೆ ಇದ್ದ ಚಿಂತೆ. ಇದರಿಂದಾಗಿಯೇ ಅಂದು ಚಂದನ್ ತಾಳ್ಮೆ ಕಳೆದುಕೊಂಡಿದ್ದರು ಎನ್ನಲಾಗಿತ್ತು.

ಅದಕ್ಕೆ ಪೂರಕವೆಂಬಂತೆ ಇದೀಗ ವಿವಾದಗಳ ಬಳಿಕ ಚಂದನ್ ಅಮ್ಮ ಆಸ್ಪತ್ರೆ ಬೆಡ್ ಮೇಲೆ ಮಲಗಿದ್ದಾಗ ಅವರ ಜೊತೆ ತೆಗೆಸಿಕೊಂಡ ಫೋಟೋವೊಂದನ್ನು ಪ್ರಕಟಿಸಿದ್ದು, ‘ನಿಮ್ಮ ಜೊತೆ ನಾನಿರಬೇಕಿತ್ತು ಅಮ್ಮ. ಬೇಗ ಗುಣಮುಖರಾಗಿ ಬನ್ನಿ. ಲವ್ ಯೂ ಸೋ ಮಚ್’ ಎಂದು ಪೋಸ್ಟ್ ಪ್ರಕಟಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು ನಿಮಗೆ ಗೌರವ ಕೊಡದ ಧಾರವಾಹಿಯಲ್ಲಿ ಮುಂದುವರಿಯಬೇಡಿ ಎಂದು ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ