‘ಮಿರ್ಜಾಪುರ’ ವೆಬ್ ಸರಣಿಯ ವಿರುದ್ಧ ದೂರು ದಾಖಲು

ಸೋಮವಾರ, 25 ಜನವರಿ 2021 (06:32 IST)
ಹೈದರಾಬಾದ್ : ಹಿಂದೂ ದೇವರುಗಳನ್ನು ಅವಮಾನಿಸುವ ದೃಶ್ಯ ಇದ್ದುದರಿಂದ  ಬಿಜೆಪಿ ನಾಯಕರು ‘ಥಂಡವ್’ ವೆಬ್ ಸರಣಿಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದೇರೀತಿ ಇದೀಗ ‘ಮಿರ್ಜಾಪುರ’  ವೆಬ್ ಸರಣಿಯ ವಿರುದ್ಧ ದೂರು ದಾಖಲಾಗಿದೆ.

ಅರವಿಂದ್ ಚತುರ್ವೇದಿ ಅವರ ಮಿರ್ಜಾಪುರದ ವೆಬ್ ಸರಣಿಯಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ಪ್ರಾದೇಶಿಕ ಭಾವನೆಗಳನ್ನು ನೋಯಿಸುವ ಮತ್ತು ಅಕ್ರಮ ಸಂಬಂಧಗಳನ್ನು ಉತ್ತೇಜಿಸುವ ದೃಶ್ಯಗಳಿವೆ ಎಂದು ಆರೋಪಿಸಿ ಅರ್ಜಿದಾರ ಎಸ್.ಕೆ.ಕುಮಾರ್ ಸುಪ್ರೀಂಕೋರ್ಟ್ ಗೆ ದೂರು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಮಿರ್ಜಾಪುರ ವೆಬ್ ಸರಣಿಯ ತಯಾರಕರು, ಅಮೆಜಾನ್ ಪ್ರೈಮ್ ಗೆ ಸುಪ್ರೀಂ ಕೋರ್ಟ್  ನೋಟಿಸ್ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ