ಆಕ್ಷೇಪಾರ್ಹ ಹೇಳಿಕೆ ಪ್ರಕರಣದಲ್ಲಿ ನಟ ಉಪೇಂದ್ರಗೆ ಬಿಗ್ ರಿಲೀಫ್

ಗುರುವಾರ, 17 ಆಗಸ್ಟ್ 2023 (16:19 IST)
ಬೆಂಗಳೂರು: ಸಮುದಾಯವೊಂದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾದ ಎರಡೂ ಪ್ರಕರಣದಲ್ಲಿ ನಟ ಉಪೇಂದ್ರಗೆ ಹೈಕೋರ್ಟ್ ನಿಂದ ಬಿಗ್ ರಿಲೀಫ್ ಸಿಕ್ಕಿದೆ.

ಸೋಷಿಯಲ್ ಮೀಡಿಯಾ ವಿಡಿಯೋವೊಂದರಲ್ಲಿ ಉಪೇಂದ್ರ ಮಾತಿನ ನಡುವೆ ಗಾದೆಯೊಂದನ್ನು ಬಳಸಿದ್ದು ಇದು ದಲಿತ ಸಮುದಾಯದವರ ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಉಪೇಂದ್ರ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶ ಪೊಲೀಸ್ ಠಾಣೆ ಮತ್ತು ಹಲಸೂರು ಗೇಟ್ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದ್ದವು.

ತಮ್ಮ ವಿರುದ್ಧ ಎಫ್ ಐಆರ್ ದಾಖಲಿಸುವುದರ ವಿರುದ್ಧ ತಡೆ ನೀಡುವಂತೆ ಉಪೇಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಹೈಕೋರ್ಟ್ ಎರಡೂ ಠಾಣೆಗಳಲ್ಲಿ ಎಫ್ ಐಆರ್ ದಾಖಲಿಸದಂತೆ ತಡೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ