ರಾಕಿಂಗ್ ಸ್ಟಾರ್ ಯಶ್ ಹಾದಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್
ಗುರುವಾರ, 17 ಜನವರಿ 2019 (09:58 IST)
ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಈ ವರ್ಷ ರೆಬಲ್ ಸ್ಟಾರ್ ಅಂಬರೀಶ್ ಗೌರವಾರ್ಥ ಬರ್ತ್ ಡೇ ಅದ್ಧೂರಿಯಾಗಿ ಆಚರಿಸಲಿಲ್ಲ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡಾ ಇದೇ ಹಾದಿಯಲ್ಲಿದ್ದಾರೆ.
ಡಿ ಬಾಸ್ ಬರ್ತ್ ಡೇ ಗೆ ಇರುವುದು ಫೆಬ್ರವರಿ 16 ಕ್ಕೆ. ಆದರೆ ಈಗಲೇ ದರ್ಶನ್ ‘ಅಂಬಿ ಅಪ್ಪಾಜಿ’ ಗೌರವಾರ್ಥ ಈ ಬಾರಿ ಅದ್ಧೂರಿ ಬರ್ತ್ ಡೇ ಆಚರಣೆ ಬೇಡ. ನನಗಾಗಿ ಹಾರ, ತುರಾಯಿ, ಕೇಕ್ ತರಬೇಡಿ, ಬ್ಯಾನರ್ ಕಟ್ಟಬೇಡಿ. ಆ ಖರ್ಚುಗಳನ್ನು ಅನಾಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡಿ ಎಂದಿದ್ದಾರೆ.
ಅಷ್ಟೇ ಅಲ್ಲ, ಕಳೆದ ವರ್ಷದಂತೆ ಈ ವರ್ಷವೂ ಪಟಾಕಿ ಸಿಡಿಸಿ, ನೂಕು ನುಗ್ಗಲು ಮಾಡಿ ಪಕ್ಕದ ಮನೆಯವರಿಗೆ ತೊಂದರೆ ಕೊಡಬೇಡಿ ಎಂದು ದರ್ಶನ್ ಮನವಿ ಮಾಡಿದ್ದಾರೆ. ಕಳೆದ ವರ್ಷವೂ ದರ್ಶನ್ ಅಭಿಮಾನಿಗಳಿಗೆ ಇದೇ ರೀತಿ ಮನವಿ ಮಾಡಿದ್ದರು. ಆದರೆ ಈ ವರ್ಷ ಅಂಬರೀಶ್ ನಿಧನದ ಶೋಕದಲ್ಲಿ ಇರುವ ಕಾರಣ ಕೇಕ್ ಕೂಡಾ ಕಟ್ ಮಾಡದೇ ಇರಲು ನಿರ್ಧರಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ