ಡಾರ್ಲಿಂಗ್ ಕೃಷ್ಣ ದಂಪತಿ ಪಾಲಿಗೆ ಪ್ರೇಮಿಗಳ ದಿನ ಇನ್ನೂ ಸ್ಪೆಷಲ್!

ಸೋಮವಾರ, 14 ಫೆಬ್ರವರಿ 2022 (09:50 IST)
ಬೆಂಗಳೂರು: ಡಾರ್ಲಿಂಗ್ ಕೃಷ್ಣ-ಮಿಲನಾ ನಾಗರಾಜ್ ದಂಪತಿ ಪಾಲಿಗೆ ಈ ಪ್ರೇಮಿಗಳ ದಿನ ವಿಶೇಷವಾಗಿದೆ. ಇದಕ್ಕೆ ಎರಡು ಕಾರಣಗಳಿವೆ.

ಇದೇ ದಿನ ಕಳೆದ ವರ್ಷ ಡಾರ್ಲಿಂಗ್ ಕೃಷ್ಣ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಇಂದು ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ.

ಇದರ ಜೊತೆಗೆ ಈ ವರ್ಷ ಲವ್ ಮಾಕ್ಟೇಲ್ 2 ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನವಾಗುತ್ತಿರುವುದು ಈ ಜೋಡಿಯ ಖುಷಿ ಹೆಚ್ಚಿಸಿದೆ. ನಿನ್ನ ಜೊತೆಗೆ ಈ ಜೀವನ ಹಂಚಿಕೊಳ‍್ಳುವ ನಿರ್ಧಾರ ಮಾಡಿದ್ದು ನನ್ನ ಜೀವನದ ಅತ್ಯುತ್ತಮ ನಿರ್ಧಾರ ಎಂದು ಇಬ್ಬರೂ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ