ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪರ ಅಭಿಮಾನಿಗಳ ಬ್ಯಾಟಿಂಗ್
ಒಬ್ಬ ದಲಿತ ಅಭಿಮಾನಿಯಂತೂ ದರ್ಶನ್ ಗೆ ಯಾವ ಜಾತಿಯೂ ಮುಖ್ಯವಲ್ಲ. ಅವರನ್ನು ನೋಡಬೇಕೆಂದು ರಾಮನಗರದಿಂದ ಮಂಡ್ಯಕ್ಕೆ ಹೋಗಿದ್ದೆ. ಕಿಕ್ಕಿರಿದು ತುಂಬಿದ್ದ ಸಾವಿರಾರು ಜನರ ಮಧ‍್ಯೆ ನನಗಾರಿ ಕಾರು ಇಳಿದು ಬಂದು ನನ್ನ ಹೆಗಲ ಮೇಲೆ ಕೈ ಹಾಕಿ ಫೋಟೋಗೆ ಪೋಸ್ ನೀಡಿದರು ಎಂದು ಅಭಿಮಾನಿ ತಮ್ಮ ನೆಚ್ಚಿನ ನಟನನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಹಲವು ಅಭಿಮಾನಿಗಳು ಇಂದ್ರಜಿತ್ ಲಂಕೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಮೊದಲು ನಿಮ್ಮ ಅಕ್ಕ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.